ಅಭಿಪ್ರಾಯ / ಸಲಹೆಗಳು

ದಿನಾಂಕ: 19-10-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 20-10-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

 

 

ಮಹಿಳೆ ಕಾಣೆಯಾಗಿರುವ ಬಗ್ಗೆ:

ಶ್ರೀನಿವಾಸಪುರ ಪೊಲೀಸ್‌ ಠಾಣೆಯಲ್ಲಿ ಮಹಿಳೆ  ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ,  ಶ್ರೀನಿವಾಸಪುರ  ತಾಲ್ಲೂಕು  ಸೋಮಯಾಜಲಪಲ್ಲಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ,  ದಿನಾಂಕ:19/11/2020 ರಂದು ಸಂಜೆ 04:00 ಗಂಟೆಗೆ ಪಿರ್ಯಾದಿ ಕೃಷ್ಣಪ್ಪ ಬಿನ್ ಯಲ್ಲಪ್ಪ, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,ತನಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳಿದ್ದು. ತನ್ನ ಮಗಳಾದ ಲಲಿತ ಸುಮಾರು 24 ವರ್ಷ ರವರನ್ನು  ಚಿಕ್ಕಬ್ಬಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಕುರುಮಾರಲ್ಲಿ ಗ್ರಾಮದ ಕೃಷ್ಣಪ್ಪ ರವರ ಮಗನಾದ ಚಲಪತಿ ಎಂಬುವರಿಗೆ ಸಂಪ್ರದಯಂದಂತೆ ಕೊಟ್ಟು ಮದುವೆ ಮಾಡಿದ್ದು ಮದುವೆ ನಂತರ ತನ್ನ ಮಗಳು ಮತ್ತು ತನ್ನ ಅಳಿಯ ಬೆಂಗಳೂರಿನಲ್ಲಿ ಟೈಲರ್ ಕೆಲಸ ಮಾಡಿಕೊಂಡು ಜೀವ ನಡೆಸುತ್ತಿದ್ದು ತದನಂತರ ಕೋರೊನಾ ಸಲುವಾಗಿ ತನ್ನ ಮಗಳು ಮತ್ತು ತನ್ನ ಅಳಿಯ ತಮ್ಮ ಊರಿಗೆ ಬಂದು ತಮ್ಮ ಮನೆಯಲ್ಲಿ ಕೆಲವುದಿನಗಳು ಇದ್ದು ತಮ್ಮ ಅಳಿಯ ಅವರ ಸ್ವಂತ ಊರಿಗೆ ಹೋಗಿ ಆಗಾಗ ತಮ್ಮ ಮನೆಗೆ ಬಂದು ಹೋಗುತ್ತಿದ್ದನು ಈಗಿರುವಾಗ ದಿನಾಂಕ:17/11/2020 ರಂದು ರಾತ್ರಿ ಸುಮಾರು 11 ಗಂಟೆ ಸಮಯದಲ್ಲಿ ತನ್ನ ಮಗಳಾದ ಲಲಿತ ಟಿ.ವಿ.ನೋಡುತ್ತಿದ್ದು  ತಾವು ಎಲ್ಲಾರು ಮಲಗಿದ್ದು. ನಂತರ ಬೆಳಿಗ್ಗೆ 05:00 ಗಂಟೆಯ ಸಮಯದಲ್ಲಿ ಎದ್ದು ನೋಡಿದಾಗ ತನ್ನ ಮಗಳು ತಾನು ಮಲಗುವ ಮಂಚದ ಮೇಲೆ ಕಾಣಾದ ಕಾರಾಣ ತಾನು ಗಾಬರಿಗೊಂಡು ಅಕ್ಕ-ಪಕ್ಕದ ಮನೆಗಳಲ್ಲಿ ತಮ್ಮ ನೆಂಟರಿಷ್ಟರು ಮತ್ತು ಪರಿಚಯಸ್ಥರ ಮನೆಗಳಲ್ಲಿ ಹುಡುಕಾಡಲಾಗಿ ಪತ್ತೆಯಾಗದೆ ಕಾಣೆಯಾಗಿರುತ್ತಾಳೆ. ತನ್ನ ಮಗಳು ಲಲಿತ ಕಾಣೆಯಾಗಿರುವ ಬಗ್ಗೆ  ತಮ್ಮ ಗ್ರಾಮದ ವಿಜಯ್ ಕುಮಾರ್ ಬಿನ್ ಕೃಷ್ಣಪ್ಪ ರವರ  ಮೇಲೆ ಅನುಮಾನ ಇದ್ದು, ಕಾಣೆಯಾಗಿದ್ದ ತನ್ನ ಮಗಳನ್ನು ಇದುವರವಿಗೂ ಹುಡುಕಾಡಿಕೊಂಡಿದ್ದು ಪತ್ತೆಯಾಗದ ಕಾರಣ ಈ ದಿನ ಬಂದು ತಡವಾಗಿ ಬಂದು ದೂರು ನೀಡುತ್ತಿದ್ದು, ಕಾಣೆಯಾಗಿರುವ ತನ್ನ ಮಗಳಾದ ಲಲಿತ ರವರನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರು.

 

 

ಇತ್ತೀಚಿನ ನವೀಕರಣ​ : 20-11-2020 04:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080