ಅಭಿಪ್ರಾಯ / ಸಲಹೆಗಳು

ದಿನಾಂಕ: 06-10-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 07-10-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

 

ಮಾರಣಾಂತಿಕ ರಸ್ತೆ ಅಪಘಾತ:

ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಮಾರಣಾಂತಿಕ ರಸ್ತೆಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಕೋಲಾರ ತಾಲ್ಲೂಕು ಮಡೇರಹಳ್ಳಿ ಗೇಟ್‌ ಪಕ್ಕದಲ್ಲಿ ಘಟನೆ ಸಂಬವಿಸಿರುತ್ತದೆ.  ಕೋಲಾರ ನಗರದ ಕೀಲುಕೋಟೆ  ವಾಸಿಯಾದ ಮಂಜುನಾಥ್‌ಸಿಂಗ್‌ ಬಿನ್  ಶಿವರಾಮ್‌ಸಿಂಗ್‌  ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ ೦೬-೧೧-೨೦೨೦ ರಂದು ಪಿರ್ಯಾದಿ ತಂದೆ ಶಿವರಾಮ್‌ ಸಿಂಗ್‌ ಎಂಬುವರು  ಕೋಲಾರ ಮತ್ತು ಬೆಂಗಳೂರು ರಾಷ್ಟ್ರಿಯ ಹೆದ್ದಾರಿ ಬಳಿ  ಸುಮಾರು ಮುಂಜಾನೆ  ೫:೩೦  ಗಂಟೆಯಲ್ಲಿ ನಡೆದುಕೊಂಡು ಹೋಗುತ್ತಿರುವಾ ಕೋಲಾರ ಕಡೆಯಿಂದ ಬಂದ ಕೆ.೦೧ ಎಡಿ.೯೦೭೩ ಎಂಬ ವಾಹನದ ಸವಾರನು ಸದರಿ ವಾಹನವನ್ನು ಅತಿವೇಗ ಮತ್ತು ಅಜಾಗರುಕತಿಯಿಂದ ಚಾಲನೆ ಮಾಡಿಕೊಂಡು ಬಂದು ಏಕಾಏಕಿ ಪಿರ್ಯಾದಿಯ ತಂದೆಗೆ ಡಿಕ್ಕಿ ಹೊಡೆದು ಅಪಘಾತ ಉಂಟುಮಾಡಿ ವಾಹನವನ್ನು ನಿಲ್ಲಿಸದೇ ಅಲ್ಲಿಂದ ಹೊರಟಿದ್ದು, ಸದರಿ ಅಪಘಾತದ ಪರಿಣಾಮ ಪಿರ್ಯಾದಿ  ತಂದೆಯ ತಲೆಗೆ ತೀವ್ರಸ್ವರೂಪದ ಗಾಯಗಳಾಗಿದ್ದು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.   ಎಂದು ದೂರು ದಾಖಲಿಸಿರುತ್ತಾರೆ.

 

ಕಳವು:

ಮಾಸ್ತಿ ಪೊಲೀಸ್‌ ಠಾಣೆಯಲ್ಲಿ  ಕಳವಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.ಮಾಲೂರು ತಾಲ್ಲೂಕು , ಮಾಸ್ತಿ ಹೋಬಳಿ, ಹಸಾಂಡಹಳ್ಳಿಯ ಸರ್ಕಾರಿ ಪ್ರೌಡಶಾಲೆಯಲ್ಲಿ  ಘಟನೆ ಸಂಬವಿಸಿರುತ್ತದೆ.  ಮಾಲೂರು ತಾಲ್ಲೂಕು , ಮಾಸ್ತಿ ಹೋಬಳಿ, ಹಸಾಂಡಹಳ್ಳಿಯ ಸರ್ಕಾರಿ ಪ್ರೌಡಶಾಲೆಯ ಹೆಡ್‌ ಮಾಸ್ಟರ್‌ ಕೃಷ್ಣಪ್ಪ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ ೦೬-೧೧-೨೦೨೦ ರಂದು ಶಾಲೆಗೆ ಬಂದು  ಸಂಜೆ  ಬೀಗಗಳನ್ನು ಹಾಕಿಕೊಂಡು  ಮನೆಗೆ ತೆರಳಿದ್ದು,  ಮರು ದಿನ ಬಂದು ನೋಡಲಾಗಿ   ಶಾಲೆಯ ಗೇಟ್‌ ಬೀಗ ಮುರಿದಿದ್ದು,ಯಾರೋ ಕಳ್ಳರು  ೦೬-೧೧-೨೦೨೦ ರಂದು ಅದೇ ದಿನರಾತ್ರಿ  ಶಾಲೆಗೆ ಹಾಕಿದ ಬೀಗಗಳನ್ನು ಮುರುದು ಶಾಲೆಯ ಕಂಪ್ಯೂಟರ್‌ ಕೊಠಡಿಗೆ ನುಗ್ಗಿ ಸುಮಾರು ೧೬ ಬ್ಯಾಟರಿಗಳನ್ನು ಕಳವು ಮಾಡಿ ಪರಾರಿ ಯಾಗಿರುತ್ತಾರೆ ಎಂದು ದೂರು ದಾಖಲಿಸಿರುತ್ತಾರೆ.

 

ಇತ್ತೀಚಿನ ನವೀಕರಣ​ : 07-11-2020 04:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080