ಅಭಿಪ್ರಾಯ / ಸಲಹೆಗಳು

ದಿನಾಂಕ: 10-10-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 11-10-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

 

ವ್ಯಕ್ತಿ ಕಾಣೆಯಾಗಿರುವ ಬಗ್ಗೆ:

  ಗಲ್‌ಪೇಟೆ ಪೊಲೀಸ್‌  ಠಾಣೆಯಲ್ಲಿ  ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.   ಕೋಲಾರ ನಗರದ  ಸಂತೆಗೇಟ್‌ ,ಬೋವಿ ಕಾಲೋನಿ ಬಳಿ ಘಟನೆ ಸಂಬವಿಸಿರುತ್ತದೆ. ಸದರಿ ವಿಳಾಸದ ವಾಸಿಯಾದ  ಜಯಕುಮಾರ್‌ ಬಿನ್ ನಾಗರಾಜ್‌ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ   ಪಿರ್ಯಾದಿಯ ತಂಗಿ ನೇತ್ರಾವತಿ  ಎಂಭುವರನ್ನು  ಬೆಂಗಳೂರು  ಬಷ್ಶಿ ಗಾರ್ಡನ್‌  ವಾಸಿಯಾದ ಕೃಷ್ಣಪ್ಪ ಎಂಬುವರ ಜೊತೆ ವಿವಾಹ ವಾಗಿದ್ದು, ಸದರಿ ದಂಪತಿಗಳ ನಡುವೆ  ಸಣಸಾರಿಕ ವಿಚಾರದಲ್ಲಿ ಜಗಳದಿಂದ  ತವರು ಮನೆಯಲ್ಲಿಯೇ ಇದ್ದು  ಅದರಂತೆ ದಿನಾಂಕ ಪಿರ್ಯಾದಿ ಮತ್ತು ತಂದೆ ಮನೆಯಲ್ಲಿ  ಇಲ್ಲದ ಸಮಯದಲ್ಲಿ ದದಿನಾಂಕ ೨೫-೧೦-೨೦೨೦ ರಂದು ಮನೆಯಿಂದ ಎಲ್ಲಿಯೋ ಹೋಗಿ ಬರುತ್ತೇನೆಂದು ಹೇಳಿ  ಹೋದವರು ಮರುಳಿ ಮನೆಗೆ ಬಾರದೇ  ಮತ್ತು ಸಂಬಂದಿಕರ ಮನೆಯಲ್ಲೂ ವಿಚಾರಿಸಿ ನೊಡಲಾಗಿ ಅಲ್ಲಿಗೂ ಹೋಗದೇ ಕಾಣೆಯಾಗಿರುತ್ತಾರೆ, ಎಂದು ಪಿರ್ಯಾದಿ  ತಡವಾಗಿ ದೂರು ದಾಖಲಿಸಿರುತ್ತಾರೆ.

 

ಮಾರಣಾಂತಿಕ ರಸ್ತೆ ಅಪಘಾತ:

ನಂಗಲಿ ಪೊಲೀಸ್‌ ಠಾಣೆಯಲ್ಲಿ  ಮಾರಣಾಂತಿಕ ರಸ್ತೆ ಅಪಗಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತದೆ  ಮುಳಬಾಗಿಲು ತಾಲ್ಲೂಕು , ಮಲ್ಲೆಕುಪ್ಪ – ಪಟ್ರಹಳ್ಳಿ ರಸ್ತೆ , ಎಮ್.ವಿ ಸುಬ್ರಮಣಿ ಮನೆಯ ಪಕ್ಕ ಘಟನೆ ಸಂಬವಿಸಿರುತ್ತದೆ,   ಸದರಿ ವಿಳಾಸದ ವಾಸಿಯಾದ ರಾದಾಕರಷ್ಣ ಬಿನ್ ಲೇಟ್‌ ರಾಮಪ್ಪ ಎಂಬುವರು ಠಾಣೆಗೆ ಹಾಜರಾಗಿ ನೀಢಿದ ದೂರಿನ  ಸಾರಾಂಶವೇನೆಂದರೆ  ದಿನಾಂಕ ೧೦-೧-೨೦೨೦ ರಂದು ರಾತ್ರಿ ಸುಮಾರು ೭:೩೦ ಗಂಟೆ ಸಮಯದಲ್ಲಿ  ಮಲ್ಲೆಕುಪ್ಪ – ಪಟ್ರಹಳ್ಳಿ ರಸ್ತೆ , ಎಮ್.ವಿ ಸುಬ್ರಮಣಿ ಮನೆಯ ಬಳಿ ಆಟೋದಲ್ಲಿ  ಅನಿತಾ ಕೊಂ ಮದುಬಾಬು ಎಂಬುವರು ಇಳಿದು  ರಸ್ತೆ ದಾಟುವಾಗ  ನಂಗಲಿ ಕಡೆಯಿಂದ ಕಬಂದ ಕೆ.ಎ ೫೧ ಎಚ್ ೪೫೩೨ ಸಂಖ್ಯೆಯ ದ್ವಿಚಕ್ರ ವಾಹನ ಅತಿವೇಗ ಮತ್ತು ಅಜಾಗರು ಕತೆಯಿಂದ ಚಾಲನೆ ಮಾಡಿಕೊಂಡು ಬಂದು ಏಕಾ ಏಕಿ  ಅನಿತಾ ಕೊಂ ಮದುಬಾಬು ಎಂಬುವರಿಗೆ ಡಿಕ್ಕಿ ಹೊಡೆದು ವಾಹನ ಸಮೇತ ಕೆಳಗೆ ಬಿದ್ದು, ಸವಾರನಿಗೂ ಮತ್ತು ಅನಿತಾ ಎಂಬುವರಿಗೂ  ತಲೆಗೆ ತೀವ್ರ ಗಾಯಗಳಾಗಿದ್ದು , ಅಲ್ಲಿನ ಸ್ಥಳೀಯರು ಸ್ಪಂದಿಸಿ ಚಿಕಿತ್ಸೆಗೆ ಕೋಲಾರ ಆರ್‍.ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿದ್ದು,  ಅದರಲ್ಲಿ  ಕೆ.ಎ ೫೧ ಎಚ್ ೪೫೩೨ ಸಂಖ್ಯೆಯ ಸಾವಾರ ರಘುಪತಿ ಬಿನ್ ಬಾಲರೆಡ್ಡಿ  ಆಂದ್ರಪ್ರದೇಶ್, ಚೀತಮಾಕಲಪಲ್ಲಿ ಗ್ರಾಮದ ವಾಸಿ ಎಂದು ಗುರ್ತಿಸಿದ್ದು,  ಆರ್‍.ಎಲ್ ಜಾಲಪ್ಪ ಆಸ್ಪತ್ರೆಯಿಂದ ಹೆಚ್ಚಿನ ಚಿಖಿತ್ಸೆಗೆ ಬೆಂಳೂರಿಗೆ ಹೋಗುವ ಮಾರ್ಗ ಮದ್ಯೆ ಮೃತಪಟ್ಟಿರುತ್ತಾನೆ.

ಇತ್ತೀಚಿನ ನವೀಕರಣ​ : 11-11-2020 05:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080