ಅಭಿಪ್ರಾಯ / ಸಲಹೆಗಳು

ದಿನಾಂಕ 26-09-201 ಸಂಜೆ 4:00 ಗಂಟೆಯಿಂದ ದಿನಾಂಕ 27-09-2021 ಸಂಜೆ 4:00 ಗಂಟೆಯ ಅವದಿಯಲ್ಲಿ  ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾದ ಪ್ರಕರಣಗಳ ಸಂಕ್ಷಿಪ್ತ ವರದಿ.

 

ಅಕ್ರಮ ಜೂಜು : ರೂ 12,500 ಮತತು ನಾಲ್ಕು ದ್ವಿಚಕ್ರ ವಾಹನ ವಶ.

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಕ್ರಮ ಜೂಜುಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಕೋಲಾರ ತಾಲ್ಲೂಕು,ಕುರುಬರಹಳ್ಳಿ ಗ್ರಾಮದ ಮುನಿಕ್ರಷ್ಣಪ್ಪ ನೀಲಗಿರಿ ತೋಲಿನ ಬಳಿ ಘಟನೆ ಸಂಬವಿಸಿರುತ್ತದೆ. ದಿ.26/09/2021 ರಂದು ಸಂಜೆ 6:30 ಗಂಟೆಗೆ ಠಾಣಾ ಎನ್.ಸಿ.ಆರ್ ಸಂ.279/2021 ರಲ್ಲಿ ಪ್ರ.ವ.ವರದಿಯನ್ನು ದಾಖಲಿಸಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣ ದಾಖಲಿಸಿದ್ದರ ಸಾರಾಂಶವೇನೆಂದರೆ ದಿ.26/09/2021 ರಂದು  ಸಂಜೆ  ಸುಮಾರು 3.30 ಗಂಟೆಯಲ್ಲಿ ಪಿ.ಎಸ್.ಐ, ರವರು ಠಾಣೆಯಲ್ಲಿ  ಕರ್ತವ್ಯ ನಿರ್ವಹಿಸುತ್ತಿದ್ದ ಕಾಲಕ್ಕೆ ತನಗೆ ಬಂದ ಖಚಿತ ವರ್ತಮಾತನ ಮೇರೆಗೆ ಕೋಲಾರ ತಾಲ್ಲೂಕು ಕುರುಬರಹಳ್ಳಿ ಗ್ರಾಮದ ಕೆರೆಯ ಪಕ್ಕದಲ್ಲಿರುವ ಕುರುಬರಹಳ್ಳಿ  ಗ್ರಾಮದ ಸಮೀಪ ಕುರುಬರಹಳ್ಳಿ ಗ್ರಾಮದ ವಾಸಿಯಾದ  ಮುನಿಕೃಷ್ಣಪ್ಪ ಬಿನ್ ಭೈರಪ್ಪ ರವರ ನೀಲಗಿರಿ ತೋಪಿನಲ್ಲಿ ಯಾರೋ ಹಣವನ್ನು ಪಣವಾಗಿಟ್ಟುಕೊಂಡು ಇಸ್ಟೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸದರಿ ಜೂಜಾಟಗಾರರ ಮೇಲೆ ದಾಳಿ ಮಾಡಲು ಪಂಚರನ್ನು ಮತ್ತು ತಮ್ಮ ಸಿಬ್ಬಂದಿಯವರನ್ನು ಪೊಲೀಸ್ ಜೀಪ್‌ನಲ್ಲಿ ಕರೆದು ಕೊಂಡು ಕೋಲಾರ ದಿಂಬಚಾಮರಹಳ್ಳಿ ಗ್ರಾಮದ  ಮಾರ್ಗವಾಗಿ ಸಂಜೆ ಸುಮಾರು 4.00 ಗಂಟೆಗೆ ಕುರುಬರಹಳ್ಳಿ ಗ್ರಾಮದ ಸಮೀಪ ಕೆಂಚಾಪುರ ಗ್ರಾಮದ ಕಡೆಯಿಂದ ಕುರುಬರಹಳ್ಳಿ ಗ್ರಾಮದ ಕಡೆಗೆ ಹೋಗುವ ರಸ್ತೆಯಲ್ಲಿ ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ತಾವುಗಳು ಸುಮಾರು 100 ಮೀಟರ್ ದೂರ ಪಶ್ಚಿಮದ ದಿಕ್ಕಿಗೆ ನಡೆದುಕೊಂಡು ಹೋಗಿ ನಂತರ ತಾವುಗಳು ನೀಲಗಿರಿ ಮರಗಳ ಮೊರೆಯಲ್ಲಿ ನಿಂತು ನೋಡಲಾಗಿ ಯಾರೋ ಸುಮಾರು 4-5 ಜನರು ಮುನಿಕೃಷ್ಣಪ್ಪ ರವರ ನೀಲಗಿರಿ ತೋಪಿನಲ್ಲಿರುವ ನೀಲಗಿರಿ ಮರಗಳ  ಕೆಳಗೆ ಕುಳಿತು ಅಂದರ್-ಬಾಹರ್ ಜೂಜಾಟ ಆಡುತ್ತಿದ್ದು, ಅವರುಗಳ ಪೈಕಿ ಒಬ್ಬ ಆಸಾಮಿಯು ಅಂದರ್‌ 500 ರೂಪಾಯಿ ಎಂತಲೂ ಮತ್ತೊಬ್ಬ ಆಸಾಮಿಯು ಬಾಹರ್ 500/-ರೂ ಎಂದು ಕೂಗುತ್ತಿದ್ದು ಜೂಜಾಟಗಾರರು ಹಣವನ್ನು ಪಣವಾಗಿಟ್ಟು ಇಸ್ಟಿಟ್ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿರುವುದು ದೃಢಪಟ್ಟಿತು.              

               ನಂತರ ತಾವು ಜೂಜಾಟಗಾರರ ಮೇಲೆ ದಾಳಿ ಮಾಡುವುದಕ್ಕಿಂತ ಮೊದಲು ತಮ್ಮ ಬಳಿ ಯಾವುದೇ ರೀತಿಯ ಆಕ್ಷೇಪಣೀಯವಾದ ವಸ್ತುಗಳು ಇಲ್ಲವೆಂತ ಪಂಚರ  ಸಮಕ್ಷಮ  ದೃಢಪಡಿಸಿಕೊಂಡು ನಂತರ ತಾವು  ಜೂಜಾಟಗಾರರನ್ನು ಸುತ್ತುವರೆದು ದಾಳಿ ಮಾಡಲಾಗಿ ಒಟ್ಟು 5 ಜನರು ಜೂಜಾಟ ಆಡುತ್ತಿದ್ದವರು ಸಿಕ್ಕಿಬಿದ್ದಿದ್ದು, ನಂತರ ತಾವು ಅವರುಗಳ ಹೆಸರು ವಿಳಾಸ ಕೇಳಲಾಗಿ 1) ವೆಂಕಟರವಣಪ್ಪ ಬಿನ್‌ ಲೇಟ್‌ ನಾರಾಯಣಪ್ಪ, 55 ವರ್ಷ, ಭೋವಿ ಜನಾಂಗ, ವ್ಯವಸಾಯ, 2) ನಾಗೇಶ್‌ ಬಿನ್‌ ಮಾಣಿಚಪ್ಪ, 24 ವರ್ಷ, ಪ ಜಾತಿ, ಕೂಲಿ ಕೆಲಸ, 3) ನಾಗೇಶ್‌ ಬಿನ್‌ ಲೇಟ್‌ ನಾಗಪ್ಪ, 30  ವರ್ಷ, ಭೋವಿ ಜನಾಂಗ, ಒಕ್ಕಲಿಗರು, ವ್ಯವಸಾಯ, 4) ನಾಗರಾಜ್‌ ಬಿನ್‌ ತಮ್ಮಣ್ಣ, 55 ವರ್ಷ, ಒಕ್ಕಲಿಗರು, ವ್ಯವಸಾಯ, 5) ರಾಜೇಶ್‌ ಬಿನ್‌ ರಾಜಪ್ಪ, 24 ವರ್ಷ, ಒಕ್ಕಲಿಗರು, ವ್ಯವಸಾಯ, ಎಲ್ಲರೂ ವಾಸ ಕುರುಬರಹಳ್ಳಿ ಗ್ರಾಮ ಕೋಲಾರ ತಾಲ್ಳೂಕು ಎಂಬುದಾಗಿ ನುಡಿದಿರುತ್ತಾರೆ. ನಂತರ ಸ್ಥಳದಲ್ಲಿ ನೋಡಲಾಗಿ 1) ಬಜಾಜ್ ಪಲ್ಸರ್ ನಂ:ಕೆಎ-53 ಇಎಂ-8101, 2) ಹೀರೋ ಸ್ಪ್ಲೆಂಡರ್ ಪ್ರೋ ನಂ:ಕೆಎ-07 ವಿ-9286 3) ಹೀರೋ ಹೊಂಢಾ ಸ್ಪ್ಲೆಂಡರ್  ನಂ:ಕೆಎ-01 ವೈ-464 ರ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ್ದರು. ನಂತರ ಸ್ಥಳದಲ್ಲಿ ಇದ್ದ ಆಸಾಮಿಗಳನ್ನು ಅಂದರ್‌-ಬಾಹರ್ ಜೂಜಾಟ ಆಡುತ್ತಿದ್ದ ಬಗ್ಗೆ ಯಾವುದಾದರೂ ಲೈಸೆನ್ಸ್‌ ವಗೈರೆ ಬಗ್ಗೆ ವಿಚಾರ ಮಾಡಲಾಗಿ ಸದರಿ ಆಸಾಮಿಗಳು ತಮ್ಮ ಬಳಿ ಯಾವುದೇ ರೀತಿಯ ಲೈಸೆನ್ಸ್‌ ವಗೈರೆ ಇಲ್ಲವೆಂತ ನುಡಿದಿದ್ದರ ಮೇರೆಗೆ ಸದರಿ 05 ಜನರನ್ನು ತಾನು ವಶಕ್ಕೆ ಪಡೆದು ನಂತರ ಸದರಿ ಆಸಾಮಿಗಳ ಮುಂದೆ ಜೂಜಾಟಕ್ಕೆ ಪಣಕ್ಕಿಟ್ಟಿದ್ದ ಒಟ್ಟು 12,500/- ರೂ ನಗದು ಹಣವನ್ನು ಮತ್ತು ಜೂಜಾಟ ಆಡಲು ಉಪಯೋಗಿಸಿದ ಒಟ್ಟು 52 ಇಸ್ಟೀಟ್ ಎಲೆಗಳನ್ನು ಮತ್ತು ಒಂದು ಪ್ಲಾಸ್ಟಿಕ್‌ ಗೋಣಿ ಚೀಲವನ್ನು ಮತ್ತು ಸ್ಥಳದಲ್ಲಿ ನಿಲ್ಲಿಸಿದ್ದ 03  ದ್ವಿಚಕ್ರ ವಾಹನಗಳನ್ನು  ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು. ಸದರಿ ಆರೋಪಿಗಳನ್ನು ಮತ್ತು ಮಾಲನ್ನು ನಿಮ್ಮ ಮುಂದೆ ಹಾಜರುಪಡಿಸುತ್ತಿದ್ದು ಈ ಬಗ್ಗೆ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ. (ಹೆಚ್ಚಿನ ವಿವರಗಳಿಗೆ ಅಸಲು ದೂರನ್ನು ಲಗತ್ತಿಸಿರುತ್ತೆ.)

 

ಇತ್ತೀಚಿನ ನವೀಕರಣ​ : 27-09-2021 05:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080