ಅಭಿಪ್ರಾಯ / ಸಲಹೆಗಳು

ದಿನಾಂಕ: 25-10-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 26-10-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

 

ಮಹಿಳೆ ಕಾಣೆಯಾಗಿರುವ ಬಗ್ಗೆ:

 ಗಲ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ಧಾಖಲಾಗಿರುತ್ತದೆ.   ಕೋಲಾರ ನಗರದ  ನೂರಿ ಮಸೀದಿಯ ರೆಹಮತ್‌ ನಗರದ ಬಳಿ ಘಟನೆ ಸಂಬವಿಸಿರುತ್ತದೆ. ಸದರಿ ವಿಳಾಸದ ವಾಸಿಯಾದ  ಮಹಮದ್‌ ಸಾದಿಕ್‌ ಪಾಷ ಬಿನ್ ಖಷೇರ್‌ಸಾಬ್‌ ಎಂಬುವರು  ಠಾನೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನಗೆ ಸುಮಾರು ೦೫ ವರ್ಷಗಳ ಹಿಂದೆ ವ ಆಯಿಷಾಸಿದ್ದಿಕ್‌ ಎಂಬುವರ ಜೊತೆ ವಿವಾಹವಾಗಿದ್ದು.  ಯಾವುದೋ ಕ್ಷುಲ್ಲಕ ವಿಚಾರವಾಗಿ  ದಿನಾಂಕ ೨೫-೧೦-೨೦೨೦ ರಂದು ರಾತ್ರಿ ಮನೆಯಲ್ಲಿ ಮಲಗಿದ್ದು ಎಲ್ಲಾ ಮಲಗಿದ ನಂತರ ಮನೆಯಲ್ಲಿದ್ದ ಸುಮಾರು ರೂ ೪೫,೦೦೦ ನಗದು ಮೊತ್ತ.ಮತ್ತು ಸುಮಾರು ೧೫೦ ಗ್ರಾಂ ಬಂಗಾರವನ್ನು ತೆದುಕೊಂಡು ಮನೆಯಿಂದ ಹೋದವಳು ಮರುಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಕುಟುಂಬಸ್ಥರ ಮತ್ತು ಸ್ನೇಹಿತರ ಮನೆಯಲ್ಲಿ ವಿಚಾರಿಸಿ ಅಲ್ಲಿಯೂ ಕಾಣದ ಕಾರಣ ದೂರು ದಾಖಲಿಸಿರುತ್ತಾರೆ.

 

ಮಾರಾಣಾಂತಿಕ ರಸ್ತೆ ಅಪಘಾತ:

ಮಾಸ್ತಿ ಪೊಲೀಸ್‌ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಗಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಮಾಲೂರು ತಾಲ್ಲೂಕು  ಅಗ್ರಹಾರ ಗೇಟ್‌ ಬಳಿ ಘಟನೆ ಸಂಬವಿಸಿರುತ್ತದೆ, ಕಂಚಿಬಂದಾರ್‍ಲಪಲ್ಲಿ ಗ್ರಾಮ ಚಿತ್ತೂರ್‌ ಮಂಡಲಂ ಆಂದ್ರಪ್ರದೇಶದ ವಾಸಿಗಳಾದ  ಕಮರಾಜ್‌ ಮತ್ತು ಅವರ ಹೆಂಡತಿ ಪದ್ಮಮ್ಮ ಇಬ್ಬರು ಎಪಿ ೩೯ ಎಎಪ್ ೦೧೦೯ ದ್ವಿಚಕ್ರ ವಾಹನದಲ್ಲಿ ಮಾಲೂರು ಕಡೆಯಿಂದ ಟೇಕಲ್‌ ಕಡೆಗೆ ಬರುತ್ತಿರುವಾಗ ಅಗ್ರಹಾರ ಗೇಟ್‌ ಬಳಿ   ಇರುವ ಒಂದು ಮೋರಿಗೆ ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು  ಮೋರಿಗೆ ಡಿಕ್ಕಿಹೊಡೆದು ಪರಿಣಾಮ ವಾಹನ ಸಮೇತಹ ಇಬ್ಬರೂ ಕೆಳಗೆ ಬಿದ್ದಿದ್ದು ಅದರಲ್ಲಿ ಪದ್ಮಮ್ಮ ಎಂಬುವರಿಗೆ ತಲೆಗೆ ತೀವ್ರ ಗಾಯವಾಗಿದ್ದು , ಚಿಕಿತ್ಸೆಗೆ  ಮಾರೂಲು ಸರ್ಕಾರಿ ಆಸ್ಪತ್ರೆ ದಾಖಲಿಸಿದ್ದು, ಅಲ್ಲಿ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಿಮಾನ್ಸ್‌ಆಸ್ಪತ್ರಗೆ ದಾಖಲು ಮಾಡಿದ್ದು ಚಿಕಿತ್ಸೆ ಪಲಕಾರಿಯಾಗದೇ ದಿನಾಂಕ ೨೬-೧೦-೨೦೨೦ ರಂದು ಮೃತಪಟ್ಟಿರುತ್ತಾರೆ.

ಇತ್ತೀಚಿನ ನವೀಕರಣ​ : 27-10-2020 04:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080