ಅಭಿಪ್ರಾಯ / ಸಲಹೆಗಳು

ದಿನಾಂಕ 25-07-2021 ಸಂಜೆ 4:00 ಗಂಟೆಯಿಂದ ದಿನಾಂಕ 26-07-2021 ಸಂಜೆ 4:00 ಗಂಟೆಯ ಅವದಿಯಲ್ಲಿ  ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾದ ಪ್ರಕರಣಗಳ ಸಂಕ್ಷಿಪ್ತ ವರದಿ.

 

 

 

ಕಳವು:

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಕಳವಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ತಾಲ್ಲೂಕು  ನರಸಾಪುರ  ಕೈಗಾರಿಕ ಪ್ರದೇಶದಲ್ಲಿನ ಬಿಹಿಂದ್ ಕಂಪನಿಯ ಹಿಂಬಾಗ ಘಟನೆ ಸಂಬವಿಸಿರುತ್ತದೆ,  ಕೋಲಾರ ತಾಲ್ಲುಕು ಕೆ.ಬಿ ಹೊಸಹಳ್ಳಿ ಗ್ರಾಮದ ವಾಸಿಯಾದ  ಅನಿಲ್ ಕುಮಾರ್ ಬಿನ್ ಲೇಟ್ ಮುನಿರಾಮರೆಡ್ಡಿ ಎಂಬುವರು ಠಾಣೆಗೆ ಹಾಜರಾಜಿ ನೀಡದ ದೂರಿನ ಸಾರಾಂಶವೇನೆಂದರೆ , ಪಿರ್ಯಾದಿಯು ತನ್ನ ಅಣ್ಣನ ಬಾಬತ್ತು ಕೆ.ಎ.07ಇ.ಇ. 3263 ಪ್ಯಾಸಿನ್ನೋ ದ್ವಿಚಕ್ರ ವಾಹನವನ್ನು  ಸುಮಾರು ಎರಡು ತಿಂಗಳಿಂದ ಬಳಸು್ತಿದ್ದು, ಅದರಂತೆ   ದಿನಾಂಕ 21-07-2021 ರಂದು   ಸದರಿ ದ್ವಿಚಕ್ರ ವಾಹನದಲ್ಲಿ ತಮ್ಮ ತೋಟಕ್ಕೆ ಹೋಗಲು ಬರುತ್ತಿದ್ದು, ನರಸಾಪುರ  ಕೈಗಾರಿಕ ಪ್ರದೇಶದಲ್ಲಿನ ಬಿಹಿಂದ್ ಕಂಪನಿಯ ಹಿಂಬಾಗಕ್ಕೆ ಬಂದಾಗ ದ್ವಿಚಕ್ರ ವಾಹನದಲ್ಲಿ ಪೆಟ್ರೋಲ್ ಕಾಲಿಯಾಗಿದ್ದರಿಂದ ವಾಹನವನ್ನು ಅಲ್ಲಿಯೇ ನಿಲ್ಲಿ ಬೀಗ ಹಾಕಿ ಪೆಟ್ರೋಲ್ ತರಲು ಬಂಕ್ ಗೆ ಹೋಗಿ ಬಂದು ನೋಡುವಸ್ಟರಲ್ಲಿ ಯಾರೋ ಕಳ್ಳರು ಸದರಿ ದ್ವಿಚಕ್ರ ವಾಹನವನ್ನು  ಕಳವು ಮಾಡಿ ಪರಾರಿಯಾಗಿರುತ್ತಾರೆ, ಸದರಿ ದ್ವಿಚಕ್ರ ವಾಹನದ ಬೆಲೆ ಸುಮಾರು ರೂ 95,000 ಎಂದು ದೂರು ದಾಖಲಿಸಿರುತ್ತಾರೆ.

 

ಜಾತಿ ನಿಂದನೆ ಮತ್ತು ಹಲ್ಲೆ ಮತ್ತು ಪ್ರಾಣ ಬೆದರಿಕೆ ;

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಜಾತಿ ನಿಂದನೆ ಮತ್ತು ಹಲ್ಲೆ ಮತ್ತು ಪ್ರಾಣ ಬೆದರಿಕೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ,  ಕೋಲಾರ ತಾಲ್ಲೂಕು , ಚಿನ್ನಾಪುರ  ಗ್ರಾಮದ ಕೆರೆಯ ಬಳಿ ಘಟನೆ ಸಂಬವಿಸಿರುತ್ತದೆ, ಸದರಿ ಗ್ರಾಮದ ವಾಸಿಯಾದ ರಾಜು ಬಿನ್ ಅಮರನಾರಾಯಣಸ್ವಾಮಿ ಎಂಬುವರು  ಠಾಣೆಗೆ ಹಾಜರಾಗಿ ನೀಡಿದ ದೂರಿ ಸಾರಾಂಶವೇನೆಂದರೆ , ಪಿರ್ಯಾದಿಯು  ಹಸುಗಳನ್ನು ಮೇಯಿಸಲು  ಗದ್ದೇಕಣ್ಣೂರು ಗ್ರಾಮದ ಕೆರೆಗೆ ಬಂದು ಮೇಯಿಸುತ್ತಿದ್ದರು , ಇದನ್ನು ಸಹಿಸದ ಒಕ್ಕಲಿಗ ಜನಾಂಗಕ್ಕೆ ಸೇರಿದ ಗದ್ದೇಕಣ್ಣೂರು ಗ್ರಾಮದ ವಾಸಿಯಾದ  ರಮೇಶ್  ಎಂಬುವರು  ಹಸುಗಳನ್ನು ಮೇಯಿಸಲು ಬಿಡದೇ  ವಿನಾಕಾರಣ ಜಗಳ ತೆಗೆದು  ಜಾತಿ ನಿಂದನೆ ಮಾಡುತ್ತಿದ್ದರು ಅದರಂತೆ ದಿನಾಂಕ 25-07-2021 ರಂದು 11:15 ರಲ್ಲಿ ಹಸುಗಳನ್ನು ಮೇಯಿಸಲು  ಗದ್ದೇಕಣ್ಣೂರು ಗ್ರಾಮದ ಕೆರೆಗೆ ಬಂದಿದ್ದಾಗ   ಒಕ್ಕಲಿಗ ಜನಾಂಗಕ್ಕೆ ಸೇರಿದ ಗದ್ದೇಕಣ್ಣೂರು ಗ್ರಾಮದ ವಾಸಿಯಾದ  ರಮೇಶ್  ಎಂಬುವರು   ಏಕಾಏಕಿ ಬಂದು ಜಗಳ ತೆಗೆದು, ಕೆಳಗಿನ ಜಾತಿ ನನ್ನ ಮಕ್ಕಳು ಎಂದು ಜಾತಿ ನಿಂದನೆ ಮಾಡಿ , ಪಕ್ಕದಲ್ಲಿದ್ದ  ದೊಣ್ಣೆಯಿಂದ ಬೆನ್ನಿಗೆ ಹೆಡೆದು ಹಲ್ಲೆ ಮಾಡಿ , ಮುಂದೆ  ಹಸುಗಳನ್ನು ಇಲ್ಲಿ ಮೇಯಿಸಿದರೆ ಸಾಯಿಸಿಬಿಡುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.  ಎಂದು ದೂರು ದಾಖಲಿಸಿರುತ್ತಾರೆ.

 

ಇತ್ತೀಚಿನ ನವೀಕರಣ​ : 26-07-2021 05:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080