ಅಭಿಪ್ರಾಯ / ಸಲಹೆಗಳು

ದಿನಾಂಕ 21-09-201 ಸಂಜೆ 4:00 ಗಂಟೆಯಿಂದ ದಿನಾಂಕ 22-09-2021 ಸಂಜೆ 4:00 ಗಂಟೆಯ ಅವದಿಯಲ್ಲಿ  ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾದ ಪ್ರಕರಣಗಳ ಸಂಕ್ಷಿಪ್ತ ವರದಿ

.

 ಮಾದಕ ವಸ್ತು ಗಾಂಜಾ ಮಾರಾಟ , ಮತ್ತು ಕಳವು:

 

ದಿ.21/09/2021 ರಂದು ಮಧ್ಯಾಹ್ನ 2:30 ಗಂಟೆಗೆ  ಪಿ.ಐ ಸಾಹೇಬರು ಒಬ್ಬ ಆರೋಪಿಯನ್ನು ಮತ್ತು ಮಾಲನ್ನು ಠಾಣೆಗೆ ಹಾಜರುಪಡಿಸಿ ನೀಡಿದ ಜ್ಞಾಪನವನ್ನು ಪಡೆದು ಪ್ರಕರಣ ದಾಖಲಿಸಿದ್ದರ ಸಾರಾಂಶವೇನೆಂದರೆ  ದಿ.21/09/2021 ರಂದು ಬೆಳಗ್ಗೆ  ಸುಮಾರು 11 ಗಂಟೆಯಲ್ಲಿ ಪಿಐ ಸಾಹೇಬರು  ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಲಕ್ಕೆ ತನಗೆ ಬಂದ ಖಚಿತ ಮಾಹಿತಿಯಂತೆ ಕೋಲಾರ ತಾಲ್ಲೂಕು ಮಾರ್ಜೇನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಕೊಂಡರಾಜನಹಳ್ಳಿ ಗ್ರಾಮದ ವಾಸಿಯಾದ ಬಾಬೂಸಿಂಗ್‌ ಬಿನ್‌ ಶಿವರಾಮ್‌ ಸಿಂಗ್‌ ರವರು ಗಾಂಜಾವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ತಮ್ಮ ವಾಸದ ಮನೆಯ ಮುಂದೆ ಇರುವ ರಾಗಿ ಹೊಲದ ಜಮೀನಿನಲ್ಲಿ ಗಾಂಜಾವನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸದರಿ ಅಕ್ರಮ ದಾಸ್ತಾನು ಮಾಡಿರುವ ಗಾಂಜಾ ಮೇಲೆ ದಾಳಿ ಮಾಡುವ ಸಲುವಾಗಿ ಪಂಚಾಯ್ತಿದಾರರ ಮತ್ತು ತಮ್ಮ ಸಿಬ್ಬಂದಿಯವರಾದ ಎಎಸ್‌ಐ ಶ್ರೀ.ಸಯ್ಯದ್‌ ಖಾಸೀಂ, ‍ಶ್ರೀ.ರಮೇಶ್‌. ಹೆಚ್‌.ಸಿ-169, ಆನಂದ್‌ ಕುಮಾರ್‌, ಸಿಪಿಸಿ-611 ಮತ್ತು ಜೀಫ್‌ ಚಾಲಕ ಸೋಮಶೇಖರ್‌ ಎಹೆಚ್‌ಸಿ-06 ರವರೊಂದಿಗೆ ಸರ್ಕಾರಿ ಜೀಪ್‌ ನಂ:ಜೀಪ್ ಕೆಎ-07 ಜಿ-648 ರ ವಾಹನದಲ್ಲಿ ಕರೆದುಕೊಂಡು ಸದರಿ ಸ್ಥಳವನ್ನು ಪರಿಶೀಲಿಸುವ ಸಲುವಾಗಿ ಸ್ಥಳಕ್ಕೆ ಆಗಮಿಸಲು ಪತ್ರಾಂಕಿತ ಅಧಿಕಾರಿ ಆದ ಕೋಲಾರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕರನ್ನು ಬರಲು ತಾನು ಮನವಿ ಸಲ್ಲಿಸಿಕೊಂಡು ನಂತರ ತಾನು ಪಂಚಾಯಿತಿದಾರರನ್ನು ಮತ್ತು ತಮ್ಮ ಸಿಬ್ಬಂದಿ ಯವರನ್ನು ಮತ್ತು ಪತ್ರಾಂಕಿನ ಅಧಿಕಾರಿಯನ್ನು ಕೋಲಾರ ತಾಲ್ಲೂಕು, ಚಿನ್ನಾಪುರ ಕಾಮಧೇನಹಳ್ಳಿ ಮಾರ್ಗವಾಗಿ ಮಾರ್ಜೇನಹಳ್ಳಿ ಗ್ರಾಮಕ್ಕೆ ಹೋಗಿ ನಂತರ ಮಾರ್ಜೇನಹಳ್ಳಿ ಮಾರ್ಗದಿಂದ ಬೆಸ್ತೇನಹಳ್ಳಿ ಗ್ರಾಮಕ್ಕೆ ಹೋಗುವ ಕಾಲುದಾರಿಯ ರಸ್ತೆಯಲ್ಲಿರುವ ಬಾಬೂಸಿಂಗ್‌ ರವರ ಮನೆಯ ಬಳಿಗೆ ಬೆಳಗ್ಗೆ 11:45 ಗಂಟೆಗೆ ಹೋಗಿ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸುವಷ್ಟರಲ್ಲಿ ಯಾರೋ ಒಬ್ಬ ಆಸಾಮಿಯು ಬಾಬೂಸಿಂಗ್‌ ರವರ ಮನೆಯ ಮುಂದೆ ನಿಂತಿದ್ದವನು ಸದರಿ ಆಸಾಮಿಯು ಪೊಲೀಸ್‌ ಜೀಪ್‌ ಮತ್ತು ಪೊಲೀಸ್‌ ಸಿಬ್ಬಂದಿಯವರನ್ನು ನೋಡಿ ಅಲ್ಲಿಂದ ಓಡಿ ಹೋದನು. ನಂತರ ತಾವು ಸದರಿ ಆಸಾಮಿಯನ್ನು ಹಿಂಬಾಲಿಸಿ ಹಿಡಿದು ಹೆಸರು ವಿಳಾಸ ಕೇಳಲಾಗಿ ಬಾಬೂಸಿಂಗ್ ಬಿನ್ ಲೇಟ್ ಶಿವರಾಮ್ ಸಿಂಗ್, 38 ವರ್ಷ, ರಜಪೂತರು, ಗ್ರಾನೈಟ್ ಕೆಲಸ, ವಾಸ -ಕೊಂಡರಾಜನಹಳ್ಳಿ ಗ್ರಾಮ. ಕೋಲಾರ ತಾಲ್ಲೂಕು. ಹಾಲಿ ವಾಸ-ಮಾರ್ಜೇನಹಳ್ಳಿ ತೋಟದ ಮನೆ, ಬೆಸ್ತೇನಹಳ್ಳೀ ಗ್ರಾಮದ ರಸ್ತೆ, ಕೋಲಾರ ತಾಲ್ಲೂಕು. ಎಂಬುದಾಗಿ ನುಡಿದಿರುತ್ತಾನೆ. ನಂತರ ತಾನು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳದಲ್ಲಿದ್ದ  ಪತ್ರಾಂಕಿತ ಅಧಿಕಾರಿಯಾದ ಕೊಲಾರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕರೊಂದಿಗೆ ಪಂಚರ ಸಮಕ್ಷಮ ಬಾಬೂಸಿಂಗ್ ರವರ ಮನೆಯ ಸುತ್ತ-ಮುತ್ತ ಹೊಲದಲ್ಲಿ ಹುಡುಕಾಡಲಾಗಿ ಬಾಬೂಸಿಂಗ್ ರವರ  ಮನೆಯ ಮುಂಭಾಗದ ಗೇಟ್ ನ ಪಕ್ಕದಲ್ಲಿರುವ ರಾಗಿ ಹೊಲದ ಜಮೀನಿನಲ್ಲಿ ಬಾಬೂಸಿಂಗ್ ರವರ ಮನೆಯ ಆವರಣದ ಗೋಡೆಯ ಪಕ್ಕದಲ್ಲಿ ಒಂದು ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ಏನೋ ಕಟ್ಟಿಟ್ಟಿರುವುದು ಕಂಡು ಬಂದಿತು. ನಂತರ ತಾನು ಸದರಿ ಚೀಲದಲ್ಲಿರುವ ಮಾಲಿನ ಬಗ್ಗೆ ಮೇಲ್ಕಂಡ ಆಸಾಮಿಯನ್ನು ವಿಚಾರಣೆ ಮಾಡಿದಾಗ ಸದರಿ ಆಸಾಮಿಯು ಮಾಲಿನ ಬಗ್ಗೆ ಯಾವುದೇ ರೀತಿಯ ಸಮಂಜಸವಾದ ಉತ್ತರ ನೀಡದ ಕಾರಣ ತಾನು ಪತ್ರಾಂಕಿತ ಅಧಿಕಾರಿ ಹಾಗೂ ಪಂಚರ  ಸಮಕ್ಷಮ ಚೀಲವನ್ನು ಬಿಚ್ಚಿ ನೋಡಲಾಗಿ ಚೀಲದ ಒಳಗೆ ಮತ್ತೊಂದು ಪ್ಲಾಸ್ಟಿಕ್ ಚೀಲದಲ್ಲಿ ಏನನ್ನೋ ಕಟ್ಟಿರುವುದು ಕಂಡುಬಂದಿತು. ನಂತರ ಸದರಿ ಚೀಲವನ್ನು ಬಿಚ್ಚಿ ನೋಡಲಾಗಿ ಚೀಲದಲ್ಲಿ ಹೂ-ಕಾಯಿ ಭಾಗವನ್ನು ಒಳಗೊಂಡ ಎಲೆ ಇರುವುದು ಕಂಡು ಬಂದಿದ್ದು, ಅದರ ವಾಸನೆಯಿಂದ ತನಗೆ  ಗಾಂಜಾ ಎಂದು ತಿಳಿದು ಬಂದಿತು. ನಂತರ ತಾನು ಪಂಚರ ಸಮಕ್ಷಮ ಗಾಂಜಾವನ್ನು ಹಾಕಿರುವ ಚೀಲದಲ್ಲಿ ನೋಡಲಾಗಿ ಒಂದು ಒಡವೆಗಳು ಇರುವ ಬಾಕ್ಸ್‌ ಹಾಗೂ ನಗದು ಹಣದ ನೋಟುಗಳ ಕಟ್ಟು ಇರುವುದು ಕಂಡು ಬಂದಿತು. ನಂತರ ಸದರಿ ಗಾಂಜಾದಲ್ಲಿ ಇರುವ ನೋಟುಗಳನ್ನು ಎಣಿಸಿ ನೋಡಲಾಗಿ 500 ರೂ ಮುಖ ಬೆಲೆಯ ಒಟ್ಟು 86 ನೋಟುಗಳು ಇರುವ  43.000/-ರೂ ನಗದು ಹಣ ಇರುವುದು ಕಂಡು ಬಂದಿತು. ನಂತರ ಒಡವೆಗಳ ಬಾಕ್ಸ್‌ ನಲ್ಲಿ ಪರಿಶೀಲಿಸಲಾಗಿ 1) ಬಂಗಾರದಂತೆ ಕಾಣುವ 4  ನಕ್ಲೇಸ್‌ಗಳು 1) ಬಂಗಾರದಂತೆ ಕಾಣುವ ಒಂದು ಡಾಲರ್‌ ಇರುವ ಕತ್ತಿನ ಸರ 3) ಬಂಗಾರದಂತೆ ಕಾಣುವ ಒಂದು ಬ್ರಾಸ್‌ ಲೆಟ್‌, 4) ಬಂಗಾರದಂತೆ ಕಾಣುವ 3 ಜೊತೆ ಓಲೆ ಹಾಗೂ ಹಾಂಗೀಸ್‌ಗಳು. 5) ಬಂಗಾರದಂತೆ ಕಾಣುವ 5 ಉಂಗುರಗಳು. 6) ಬಂಗಾರದಂತೆ ಕಾಣುವ 2 ಜೊತೆ ಡ್ರಾಪ್ಸ್‌ ಓಲೆಗಳು ಮತ್ತು 7) ಬೆಳ್ಳಿಯಂತೆ ಕಾಣುವ ಒಂದು ಉಂಗುರ ಇರುವುದು ಕಂಡು ಬಂದಿತು. ನಂತರ ಸ್ಥಳಕ್ಕೆ ಎಲೆಕ್ಟ್ರಾನಿಕ್ಸ್‌  ತೂಕದ ಯಂತ್ರವನ್ನು ತರಿಸಿ ತೂಕದ ಯಂತ್ರದ ಮೂಲಕ ಒಡವೆಗಳನ್ನು ತೂಕ ಹಾಕಿ ನೋಡಲಾಗಿ ಸದರಿ ಒಡವೆಗಳ ಒಟ್ಟು ತೂಕ ದಾರಗಳು ಸೇರಿದಂತೆ  141 ಗ್ರಾಂ ತೂಕ ಇರುವುದು ಕಂಡು ಬಂದಿತು.

ನಂತರ ಸದರಿ ಚೀಲದಲ್ಲಿರುವ ಒಡವೆ ಮತ್ತು ನಗದು ಹಣವನ್ನು ಬೇರ್ಪಡಿಸಿ ಗಾಂಜಾವನ್ನು ಪಂಚಾಯ್ತಿದಾರರ ಸಮಕ್ಷಮ ಎಲೆಕ್ಟ್ರಾನಿಕ್ಸ್‌  ತೂಕದ ಯಂತ್ರದ ಮೂಲಕ ತೂಕ ಹಾಕಿ ನೋಡಲಾಗಿ ಪ್ಲಾಸ್ಟಿಕ್ ಚೀಲಗಳು ಸೇರಿದಂತೆ  ಒಟ್ಟು 1 ಕೆಜಿ 196  ಗ್ರಾಂ ತೂಕದ ಗಾಂಜಾ ಇರುವುದು ಕಂಡು ಬಂದಿತು.

ನಂತರ ತಾನು ಸದರಿ ಚೀಲದಲ್ಲಿರುವ ನಗದು ಹಣದ ಬಗ್ಗೆ ಸದರಿ ಆಸಾಮಿಯನ್ನು ವಿಚಾರ ಮಾಡಲಾಗಿ ತಾನು ಸದರಿ ಗಾಂಜಾವನ್ನು ಮಾರಾಟ ಮಾಡಿ ಬಂದ ಹಣವನ್ನು ಚೀಲದಲ್ಲಿ ಇಟ್ಟಿರುವುದಾಗಿ ನುಡಿದಿರುತ್ತಾನೆ. ನಂತರ ಸದರಿ ಆಸಾಮಿಯನ್ನು ಚೀಲದಲ್ಲಿರುವ ಗಾಂಜಾ ಬಗ್ಗೆ ವಿಚಾರಣೆಯನ್ನು ಮಾಡಲಾಗಿ ಸದರಿ ಆಸಾಮಿಯು ಈ ಒಣ ಗಾಂಜಾವನ್ನು ಈಗ್ಗೆ ಸುಮಾರು 15 ದಿನಗಳ ಹಿಂದೆ ಹೊಸಕೋಟೆಯ ಗೌಸ್‌ ಎಂಬುವರಿಂದ ತಂದು ಅದನ್ನು ಸಾರ್ವಜನಿಕರಿಗೆ  ಮಾರಾಟ ಮಾಡಿ ಉಳಿದ ಗಾಂಜಾವನ್ನು ಮಾರಾಟ ಮಾಡಲು ದಾಸ್ತಾನು ಮಾಡಿರುವುದಾಗಿ ನುಡಿದನು. ನಂತರ ಸದರಿ ಆಸಾಮಿಯನ್ನು ಚೀಲದಲ್ಲಿರುವ ಒಡವೆಗಳ ಬಗ್ಗೆ ವಿಚಾರಣೆ ಮಾಡಲಾಗಿ ಸದರಿ ಆಸಾಮಿಯು ಯಾವುದೇ ರೀತಿಯ ಸಮಂಜಸವಾದ ಉತ್ತರ ನೀಡಲಿಲ್ಲ. ನಂತರ ಸದರಿ ಆಸಾಮಿಯನ್ನು ಕುರಿತು ಗಾಂಜಾವನ್ನು ದಾಸ್ತಾನು ಮಾಡಿರುವ ಬಗ್ಗೆ ಲೈಸೆನ್ಸ್, ವಗೈರೆ ಬಗ್ಗೆ ಕೇಳಲಾಗಿ ಸದರಿ ಆಸಾಮಿಯು ತನ್ನ ಬಳಿ ಯಾವುದೇ ರೀತಿಯ ಲೈಸೆನ್ಸ್ ವಗೈರೆ ಇರುವುದಿಲ್ಲವೆಂದು ನುಡಿದಿದ್ದರ ಮೇರೆಗೆ ತಾನು ಮತ್ತು ಸಿಬ್ಬಂದಿಯವರು ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ನಂತರ ಸದರಿ ಆಸಾಮಿಯು  ತಮ್ಮ ಮನೆಯ ಮುಂದೆ ಹೊಲದಲ್ಲಿ ಇಟ್ಟಿದ್ದಂತಹ ಸುಮಾರು 50 ಸಾವಿರ ರೂ.ಗಳು ಬೆಲೆ ಬಾಳುವ ಒಟ್ಟು 1 ಕೆಜಿ 196 ಗ್ರಾಂ ತೂಕದ ಒಣ ಗಾಂಜಾವನ್ನು ಮತ್ತು ಗಾಂಜಾ ಚೀಲದಲ್ಲಿ ಇದ್ದ 43 ಸಾವಿರ ರೂ ನಗದು ಹಣವನ್ನು ಮತ್ತು 141 ಗ್ರಾಂ ತೂಕದ ಬಂಗಾರದಂತೆ ಹಾಗೂ ಬೆಳ್ಳಿಯಂತೆ ಕಾಣುವ ಒಡವೆಗಳನ್ನು ತಾನು ಪತ್ರಾಂಕಿತ ಅಧಿಕಾರಿ ಹಾಗೂ ಪಂಚಾಯ್ತಿದಾರರ ಸಮಕ್ಷಮ ಮುಂದಿನ ಕ್ರಮಕ್ಕಾಗಿ ಅಮಾನತ್ತುಪಡಿಸಿಕೊಂಡು  ಸದರಿ ಪ್ಲಾಸ್ಟಿಕ್‌ ಚೀಲಗಳಗಲ್ಲಿ ಇದ್ದ 1 ಕೆಜಿ 196 ಗ್ರಾಂ ತೂಕದ ಗಾಂಜಾವನ್ನು ಹಾಗೂ 141 ಗ್ರಾಂ ತೂಕದ ಬಂಗಾರದಂತೆ ಹಾಗೂ ಬೆಳ್ಳಿಯಂತೆ ಕಾಣವ ಒಡವೆಗಳನ್ನು ಮತ್ತು 43.000/- ರೂ ನಗದು ಹಣವನ್ನು  ಪ್ರತ್ಯೇಕವಾಗಿ ಒಂದೊಂದು ಬಳಿಯ ಚೀಲಗಳಲ್ಲಿ ಹಾಕಿ ದಾರದಿಂದ ಕಟ್ಟಿ “ MR“ ಎಂಬ ಸೀಲಿನಿಂದ ಮೊಹರು ಮಾಡಲಾಯಿತು. ಸದರಿ ಆಸಾಮಿಯು ಹೆಚ್ಚಿನ ಬೆಲೆಗೆ  ಮಾರಾಟ ಮಾಡುವ ಸಲುವಾಗಿ ಗಾಂಜಾವನ್ನು ಹೊಸಕೋಟೆಯ ಗೌಸ್‌ ಎಂಬುವರಿಂದ ತಂದು ಅಕ್ರಮ ದಾಸ್ತಾನು ಮಾಡಿರುವ ಸದರಿ ಆಸಾಮಿಯ ವಿರುದ್ದ ಸೂಕ್ತ ಕಾನೂನು ರೀತ್ಯಾ ಕ್ರಮ  ಜರುಗಿಸಲು ಸೂಚಿಸಿರುವುದಾಗಿರುತ್ತೆ. (ಹೆಚ್ಚಿನ ವಿವರಗಳಿಗೆ ಅಸಲು ದೂರನ್ನು ಲಗತ್ತಿಸಿರುತ್ತೆ.

ಇತ್ತೀಚಿನ ನವೀಕರಣ​ : 22-09-2021 04:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080