ಅಭಿಪ್ರಾಯ / ಸಲಹೆಗಳು

ದಿನಾಂಕ: 20-11-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 21-11-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

 

 

ಹಲ್ಲೆ ಮತ್ತು ಪ್ರಾಣ ಬೆದರಿಕೆ:

ಮುಳಬಾಗಿಲು ಪೊಲೀಸ್‌ ಠಾಣೆಯಲ್ಲಿ  ಹಲ್ಲೆ ಮತ್ತು ಪ್ರಾಣ ಬೆದರಿಕೆಗೆಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲ್ಲೂಕು ಅಗರ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ. ದಿನಾಂಕ:20.11.2020 ರಂದು ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಗಾಯಾಳು/ಪಿರ್ಯಾದಿ ಶ್ರೀನಿವಾಸ ಬಿನ್ ಮಿದ್ದಿ ರಾಮಪ್ಪ, 47 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಅಗರ ಗ್ರಾಮ, ಮುಳಬಾಗಲು ತಾಲ್ಲೂಕು  ರವರನ್ನು ವಿಚಾರಣೆ ಮಾಡಿ ಹೇಳಿಕೆ ದೂರನ್ನುಪಡೆದು ಠಾಣೆಗೆ ಮಧ್ಯಾಹ್ನ 12-30 ಗಂಟೆಗೆ ವಾಪಸ್ಸಾಗಿ ಠಾಣಾ ಮೊ.ಸಂ. 143/2020 ಕಲಂ 504,324, 323, ರೆ.ವಿ. 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.   ದಾಖಲಾಗಿದ್ದಗಾಯಾಳು/ಪಿರ್ಯಾದಿ ಶ್ರೀನಿವಾಸ ಬಿನ್ ಮಿದ್ದಿ ರಾಮಪ್ಪ ರವರು ನೀಡಿರುವ ಹೇಳಿಕೆ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದಲ್ಲಿ ತಮಗೂ ಮತ್ತು ತಮ್ಮ ಅಣ್ಣನಾದ ನಾಗೇಶ್ ರವರಿಗೆ ಜಮೀನು ವಿಚಾರದಲ್ಲಿ ತಕರಾರು ಇರುತ್ತೆ.  ತಮ್ಮ ಅಣ್ಣ ನಾಗೇಶ್ ರವರ ಮನೆಯಲ್ಲಿ ಗೃಹ ಪ್ರವೇಶ ಕಾರ್ಯಕ್ರಮ ಇದ್ದುದ್ದರಿಂದ ದಿನಾಂಕ:18.11.2020 ರಂದು ಬೆಳಿಗ್ಗೆ 9-30 ಗಂಟೆಯಲ್ಲಿ ತಾನು, ತನ್ನ ಮನೆಯ ಪಕ್ಕದಲ್ಲಿದ್ದ ಒಂದು ಚಪ್ಪಡಿಯನ್ನು ತಮ್ಮ ಅಣ್ಣನ ಮನೆ ಕಡೆ ಇದ್ದುದ್ದರಿಂದ ತಾನು ಅದನ್ನು ಬೇರೆ ಕಡೆಗೆ ತೆಗೆಯುತ್ತಿದ್ದಾಗ ತನ್ನ ಅಣ್ಣನಾದ 1)ನಾಗೇಶ ಬಿನ್ ಮಿದ್ದರಾಮಪ್ಪ, ನಾಗೇಶನ ಬಾವಮೈದ 2)ಲೋಕೇಶ್ ಬಿನ್ ಮಣೆಪ್ಪ, 3)ಶಂಕರ,4)ಮಣೆಪ್ಪ ರವರುಗಳು ತನ್ನನ್ನು ಕುರಿತು ಏನೋ ಬೋಳಿ ಮಗನೇ ತಮ್ಮ  ಚಪ್ಪಡಿ ತೆಗೆಯುತ್ತಿರುವುದು ಎಂತ ಅವಾಚ್ಯಶಬ್ದಗಳಿಂದ ಬೈದು,  ಈ ನಾಗೇಶ್ ರವರು ಕೈಯಲ್ಲಿದ್ದ ದೊಣ್ಣೆಯಿಂದ ತನ್ನ ತಲೆಗೆ ಹೊಡೆದು ಮೂಗೇಟುವುಂಟು ಮಾಡಿದ್ದು, ಬಿಡಿಸಲು ಬಂದ ತನ್ನ ಹೆಂಡತಿ ರಮಾದೇವಿ ರವರಿಗೆ ಲೋಕೇಶ್ ಮಚ್ಚಿನಿಂದ ಬಲಕೈಗೆ ಹೊಡೆದು ರಕ್ತಗಾಯಪಡಿಸಿದ್ದು, ನಂತರ ಎಲ್ಲರೂ ತನ್ನನ್ನು ಕೆಳಗೆ ತಳ್ಳಿ ಕೈಗಳಿಂದ ಹೊಡೆದು, ಕಾಲುಗಳಿಂದ ಒದ್ದಿದ್ದು, ಅಷ್ಟರಲ್ಲಿ  ತಮ್ಮ ಗ್ರಾಮದ ಅಂಗಡಿ ಶ್ರೀನಿವಾಸ  ಮತ್ತು ಗಂಗಾಧರ ಹಾಗೂ ತನ್ನ ಮಗಳಾದ ಮೌನಿಕ ಮತ್ತಿತರರು ಜಗಳ  ಬಿಡಿಸಿದ್ದು,  ನಂತರ ತನ್ನ ಮಗನಾದ ಚರಣ್ ರವರು ಚಿಕಿತ್ಸೆಗಾಗಿ ತನ್ನನ್ನು  ಮುಳಬಾಗಲು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ದಾಖಲು ಮಾಡಿರುತ್ತಾರೆ. ತನ್ನ  ಮೇಲೆ ಜಗಳ ತೆಗೆದು, ಬೈದು, ಹೊಡೆದು ಗಾಯಪಡಿಸಿರುವ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಈ ಪ್ರ.ವ.ವರದಿ.

 

ಇತ್ತೀಚಿನ ನವೀಕರಣ​ : 21-11-2020 03:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080