ಅಭಿಪ್ರಾಯ / ಸಲಹೆಗಳು

ದಿನಾಂಕ 15-10-201 ಸಂಜೆ 4:00 ಗಂಟೆಯಿಂದ ದಿನಾಂಕ 16-10-2021 ಸಂಜೆ 4:00 ಗಂಟೆಯ ಅವದಿಯಲ್ಲಿ  ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾದ ಪ್ರಕರಣಗಳ ಸಂಕ್ಷಿಪ್ತ ವರದಿ.

 

 

 ಅಕ್ರಮ  ಅಂತರ್ಜಾಲ ಜೂಜು ರೂ 15,100.ಹಾಗೂ 8 ಜನರ ವಶ:

ಘನ ನ್ಯಾಯಾಲಯದಲ್ಲಿ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡುತ್ತಿರುವ ರಾಘವೇಂದ್ರ ಪ್ರಕಾಶ್ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ, ಈ ದಿನ ಸಂಜೆ ಭಾತ್ಮೀದಾರರು ಪೋನ್ ಮಾಡಿ ಕುವೆಂಪು ನಗರದ ಅಮೀನ್ ಮಸೀದಿ ಹತ್ತಿರ ಟೀ ಸ್ಟಾಲ್  ಮುಂಭಾಗ ಈ ದಿನ ನಡೆಯಲಿರುವ ಐಪಿಎಲ್ ಟಿ-20 ಪೈನಲ್ ಕ್ರಿಕೆಟ್ ಪಂದ್ಯ Chennai Super kings v/s Kolkata raiders   ನಡುವೆ ನಡೆಯಲಿದ್ದು ತಂಡಗಳ ಮಧ್ಯೆ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದು ತಂಡಗಳ ಸೋಲು ಮತ್ತು ಗೆಲುವಿನ ಬಗ್ಗೆ GODSOWNEXCH.COM, freshexch.comಎಂಬ ವೆಬ್ ಸೈಟ್ ಗಳ ಮೂಲಕ ಬೆಟ್ಟಿಂಗ್ ರೇಶ್ಯೂವನ್ನು ನೋಡಿಕೊಂಡು, ಮೊಬೈಲ್ ಪೋನ್ ಗಳ ಮೂಲಕ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡಿಸುತ್ತಿರುವುದು ಖಚಿತ ಮಾಹಿತಿ ಬಂದಿದ್ದು, ಕುವೆಂಪು ಪಾಕರ್್ ಬಳಿಯಿದ್ದ ಪಂಚರನ್ನು ಬರಮಾಡಿಕೊಂಡು ಅವರನ್ನು ಪರಿಚಯಿಸಿಕೊಂಡು ಪೊಲೀಸ್ ಸಿಬ್ಬಂದಿಯವರಾದ ಪಿ.ಸಿ-309 ವೆಂಕಟರಮಣ, ಪಿ.ಸಿ-359, ಶ್ರೀನಾಥ್, ಪಿ.ಸಿ-375 ಮಂಜುನಾಥ್, ಸಿಪಿಸಿ-496 ರವಿಚಂದ್ರ ರವರನ್ನು ಪರಿಚಯ ಮಾಡಿಕೊಟ್ಟು ದಾಳಿ ಮಾಡಿ ಮಾಡಲು ಸಹಕರಿಸುವಂತೆ ಕೋರಿದ್ದು ಎಲ್ಲರೂ ಒಪ್ಪಿಕೊಂಡ ನಂತರ ಪರಸ್ಪರ ಅಂಗಶೋಧನೆ ಮತ್ತು ಮೊಬೈಲ್ ಪೋನ್ಗಳನ್ನು ಪರಿಶೀಲಿಸಿದ್ದು ಯಾರ ಮೊಬೈಲ್ಗಳಲ್ಲಿಯೂ ಸಹ ಕ್ರಿಕೆಟ್ ಬೆಟ್ಟಿಂಗ್ಗೆ ಸಂಬಂಧಪಟ್ಟ ಅಪ್/ವೆಬ್ ಸೈಟ್‌ ಡೌನ್ಲೋಡ್ ಇಲ್ಲದಿರುವ ಬಗ್ಗೆ ಖಚಿತಪಡಿಸಿಕೊಂಡು ಸಂಜೆ 7-00 ಗಂಟೆಯಲ್ಲಿ ಅಮೀನ್ ಮಸೀದಿ ಬಳಿ ಜೀಪ್ ಮತ್ತು ವಾಹನಗಳನ್ನು ಮರೆಯಾಗಿ ನಿಲ್ಲಿಸಿದ್ದು ಭಾತ್ಮಿದಾರರು ಅಲ್ಲಿದ್ದವರನ್ನು ತೋರಿಸಿ ಅವರೇ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿರುವುದು ಎಂದು ತಿಳಿಸಿ ಅಲ್ಲಿಂದ ಹೊರಟು ಹೋಗಿರುತ್ತಾರೆ.  ನಾವುಗಳು  ಸುತ್ತುವರೆದು ಅಲ್ಲಿದ್ದ 3 ಜನರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ತಿಳಿಯಲಾಗಿ 1) ಇಮ್ರಾನ್ ಮಿರ್ಜಾ @ ಮಿರ್ಜಾ ಬಿನ್ ಸೈಯ್ಯದ್ ಹುಬೇದುಲ್ಲಾ, 29 ವéರ್ಷ, ಅಲ್ಯೂಮಿನಿಯಂ  ವಕರ್್ ಕೆಲಸ, 7 ಕ್ರಾಸ್, ರಾಜಾ ನಗರ, ಕೋಲಾರ ನಗರ 2) ಉಮ್ರಾಜ್ ಪಾಷ ಬಿನ್  ಆಕ್ಮಲ್ ಪಾಷ, 23 ವರ್ಷ, ಹೋಟೆಲ್ ಕೆಲಸ, ನ್ಯಾಮತ್ ಬೀ ದರ್ಗಾ ಕೋಲಾರ ಟೌನ್ 3) ತಬ್ರೇಜ್ ಪಾಷ ಬಿನ್ ಪೈರೋಜ್ ಪಾಷ, 20 ವರ್ಷ, ಹೋಟೆಲ್ ಕೆಲಸ, ಗ್ರೀನ್ ಬಿಲ್ಡಿಂಗ್ ರಸ್ತೆ, ಮಹಾಲಕ್ಷ್ಮೀ ಲೇಔಟ್, ಕೋಲಾರ ಟೌನ್ ಎಂದು ತಿಳಿಸಿದ್ದು  

 

ಪೊಲಿಸ್ ಇನ್ಸ್ಪೆಕ್ಟರ್ ರವರು ಮೇಲ್ಕಂಡ ಆಸಾಮಿಗಳ ಪೈಕಿ 1) ಇಮ್ರಾನ್ ಮಿರ್ಜಾ ರವರನ್ನು  ಕ್ರಿಕೆಟ್ ಬೆಟ್ಟಿಂಗ್ ಜೂಜಾಟದ ಬಗ್ಗೆ ವಿಚಾರಿಸಲಾಗಿ ನಾವು ಕ್ರಿಕೆಟ್ ಬೆಟ್ಟಿಂಗ್ ಜೂಜಾಟವನ್ನು ಈಗ್ಗೆ ಸುಮಾರು 06 ತಿಂಗಳಿಂದ ಆಡುತ್ತಿದ್ದು ನಮ್ಮ ಆಂಡ್ರಾಯ್ಡ್ ಮೊಬೈಲ್ ಪೋನ್ಗಳಿಗೆ GODSOWNEXCH.COM, freshexch.com ಎಂಬ ವೆಬ್ಸೈಟ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದು GODSOWNEXCH.COM    ವೆಬ್ ಸೈಟ್ಗೆ User Id:-Mrz99, Password: Aaaa2688,, ಮತ್ತೊಂದು ವೆಬ್ಸೈಟ್ freshexch.com ವೆಬ್ ಸೈಟ್ಗೆ User Id:-24mirza, Password: Aaaa8831, ಎಂದು ಉಪಯೋಗಿಸಿಕೊಂಡು ಕ್ರಿಕೆಟ್  ಜೂಜಾಟ ಫೋನ್ ಮೂಲಕ ಬೆಟ್ಟಿಂಗ್ ಆಡುತ್ತಿರುತ್ತೇವೆ. ಕೋಲಾರದ ಮಹಾಲಕ್ಷ್ಮೀ ಲೇಔಟ್ ವಾಸಿ ಏಜಾಜ್@ ಏಜು ಬಿನ್ ಸೈಯಯ್ದ್ ಮೀರ್ ಎಂಬುವರು ಯೂಸರ್ ಐಡಿ ಮತ್ತು ಪಾಸ್ವಡರ್್ ನೀಡಿ ಬೆಟ್ಟಿಂಗ್ ಆಡಿಸುತ್ತಿರುತ್ತಾರೆಂದು ತಿಳಿಸಿರುತ್ತಾರೆ. 2) ಉಮ್ರಾಜ್ ಪಾಷ ರವರನ್ನು ವಿಚಾರ  ಮಾಡಲಾಗಿ ನಮ್ಮ ಆಂಡ್ರಾಯ್ಡ್ ಮೊಬೈಲ್ ಪೋನ್ಗೆ ಏಜಾಜ್ ರವರು freshexch.com ವೆಬ್ಸೈಟ್ಗೆ ಗಜಡಿ User Id:-Aahil625, Password: Aahil625  ರನ್ನು ನೀಡಿ ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿರುತ್ತಾರೆಂದು ತಿಳಿಸಿರುತ್ತಾರೆ. 3) ತಬ್ರೇಜ್ ಪಾಷ ರವರನ್ನು ವಿಚಾರ ಮಾಡಲಾಗಿ ನಮ್ಮ ಆಂಡ್ರಾಯ್ಡ್ ಮೊಬೈಲ್ ಪೋನ್ಗೆ ಏಜಾಜ್ ರವರು GODSOWNEXCH.COM ವೆಬ್ಸೈಟ್ಗೆ User Id:-Tabrez66, Password: Hhhh1111  ರನ್ನು ನೀಡಿ ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿರುತ್ತಾರೆಂದು ತಿಳಿಸಿರುತ್ತಾರೆಂದು ತಿಳಿಸಿರುತ್ತಾರೆ. ಏಜಾಜ್ ರವರು ಕೋಲಾರದ ವಾಸಿಗಳಾದ ಆಜಂ, ಅತೀಕ್ ರವರಿಗೂ ಸಹ User Id ಮತ್ತು Password  ಕೊಟ್ಟು ಬೆಟ್ಟಿಂಗ್ ಆಡಿಸುತ್ತಿರುತ್ತಾರೆಂದು ತಿಳಿಸಿರುತ್ತಾರೆ. ಬೆಟ್ಟಿಂಗ್ ಆಡಲು  ಹೊಸಕೋಟೆಯ ವಾಸಿಗಳಾದ ಗೌತಮ್ ಮತ್ತು ಅಂಜದ್ ರವರು ಹಣ ಹೂಡಿಕೆ ಮಾಡುತ್ತಿದ್ದು ಬೆಟ್ಟಿಂಗ್ನಿಂದ ಹಣವನ್ನು ಸಂಗ್ರಹಿಸಿದ ಹಣವನ್ನು ಗೌತಮ್ ಮತ್ತು ಅಜಂ ತೆಗೆದುಕೊಂಡು ನಮಗೆ ಕಮೀಷನ್ ಹಣ ನೀಡುತ್ತಿರುತ್ತಾರೆಂದು ತಿಳಿಸಿರುತ್ತಾರೆ.

ನಂತರ ಪೊಲೀಸ್ ಇನ್ಸ್ಪೆಕ್ಟರ್ರವರು ಮೇಲ್ಕಂಡ ಆಸಾಮಿಗಳಿಗೆ ಅವರ ಬಳಿಯಿರುವ ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕೆ ಸಂಬಂಧಪಟ್ಟಂತೆ ಹಣ ಹಾಗೂ ಇತರೆ ವಸ್ತುಗಳನ್ನು ಹಾಜರ್ಪಡಿಸಲು ಸೂಚಿಸಿದ್ದು, ಸದರಿ ಆಸಾಮಿಗಳು ಈ ಕೆಳಕಂಡಂತೆ ವಸ್ತುಗಳು ಹಾಜರ್ಪಡಿಸಿರುತ್ತಾರೆ.

ಇಮ್ರಾನ್ ಮಿರ್ಜಾ @ ಮಿರ್ಜಾ1)  ನಗದು ಹಣ  10000/- ರೂ.

2) ಒಂದು  ಸ್ಯಾಮ್ಸಂಗ್ ಕಂಪನಿಯ ಗ್ಯಾಲಾಕ್ಸಿ A51 ವಿವೋ ಕಂಪನಿಯ ಆಂಡ್ರಾಯ್ಡ್ ಮೊಬೈಲ್ ಪೋನ್. ಆಗಿದ್ದು  ಪೋನ್ನಲ್ಲಿದ್ದ ಸಿಮ್  9845268831, 8553350195 ಇರುತ್ತದೆ. ಪೊಲೀಸ್ ಇನ್ಸ್ಪೆಕರ್ ರವರು ಸದರಿ ಆಸಾಮಿ ವಶದಿಂದ ಮಾಲುಗಳನ್ನು ಮುಂದಿನ ಕ್ರಮಕ್ಕಾಗಿ ವಶಕ್ಕೆ ಪಡೆದಿರುತ್ತೆ. 

 

ಉಮ್ರಾಜ್ ಪಾಷ

 

1) ನಗದು ಹಣ  3000/- ರೂ.

2) ಒಂದು ಎಂ.ಐ ಕಂಪನಿಯ ರೆಡ್ಮೀ ನೋಟ್ 7Pro ಆಂಡ್ರಾಯ್ಡ್ ಮೊಬೈಲ್ ಪೋನ್ ಆಗಿದ್ದು  ಇದರಲ್ಲಿ ಸಿಮ್ 8867620049, 7204323192 ಇರುತ್ತದೆ. ನಂತರ ಪಿಎಸ್ಐ ರವರು ಸದರಿ ಆಸಾಮಿ ವಶದಿಂದ ಪಡೆದುಕೊಂಡ ಮಾಲುಗಳನ್ನು ಮುಂದಿನ ಕ್ರಮಕ್ಕಾಗಿ ವಶಕ್ಕೆ ಪಡೆದಿರುತ್ತೆ. 

 

ತಬ್ರೇಜ್ ಪಾಷ

1) ನಗದು ಹಣ  2100/- ರೂ.

2) ಒಂದು ಎಂ.ಐ ಕಂಪನಿಯ ರೆಡ್ಮೀ ನೋಟ್ 7pro ಆಂಡ್ರಾಯ್ಡ್ ಮೊಬೈಲ್ ಪೋನ್ ಆಗಿದ್ದು  ಸಿಮ್ 8431975793, 8431708911 ಇರುತ್ತದೆ. ಪೊಲೀಸ್ ಇನ್ಸ್ಪೆಕರ್ ಸದರಿ ಆಸಾಮಿ ವಶದಿಂದ ಮಾಲುಗಳನ್ನು ಮುಂದಿನ ಕ್ರಮಕ್ಕಾಗಿ ವಶಕ್ಕೆ ಪಡೆದಿರುತ್ತೆ. 

 

ಕೋಲಾರದ ಏಜಾಜ್ ರವರು ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ ಗಳನ್ನು  ನೀಡಿ ಬೆಟ್ಟಿಂಗ್ ಆಡಿಸುತ್ತಿರುತ್ತಾರೆ. ಹೊಸಕೋಟೆಯ ವಾಸಿಗಳಾದ ಗೌತಮ್, ಅಂಜದ್ ರವರು ಹೂಡಿಕೆ ಮಾಡಿ ಬೆಟ್ಟಿಂಗ್ ಹಣವನ್ನು ಸಂಗ್ರಹಿಸಿಕೊಳ್ಳುತ್ತಿದ್ದರೆಂದು ತಿಳಿಸಿದ್ದರಿಂದ ಮೇಲ್ಕಂಡ ಆಸಾಮಿಗಳು ತಿಳಿಸಿದ್ದು ಮೂರು ಜನ ಅಸಾಮಿಗಳನ್ನು, ಮೂರು ಮೊಬೈಲ್ ಪೋನ್ಗಳನ್ನು ಮತ್ತ ನಗದು ಹಣ 15100 ರೂಗಳನ್ನು ಮುಂದಿನ ಕ್ರಮಕ್ಕಾಗಿ ಅಮಾನತ್ತುಪಡಿಸಿಕೊಂಡಿರುತ್ತೆ. ಮಹಜರ್ನ್ನು  ಸಂಜೆ 7-15 ಗಂಟೆಯಿಂದ 8-30 ಗಂಟೆಯವರೆಗೆ ಪೂರೈಸಿ ಠಾಣೆಗೆ  ವಾಪಸ್ಸು ಬಂದು ರಾತ್ರಿ 9-00 ಗಂಟೆಗೆ ಠಾಣಾ ಮೊ.ಸಂ 141/2021 ಕಲಂ 78(1) (ಎ) ಕೆ.ಪಿ ಆಕ್ಟ್ ರೀತ್ಯ ಸ್ವಯಂ ಕೇಸು ದಾಖಲಿಸಿರುವುದಾಗಿರುತ್ತೆ.

 

ಇತ್ತೀಚಿನ ನವೀಕರಣ​ : 16-10-2021 05:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080