ಅಭಿಪ್ರಾಯ / ಸಲಹೆಗಳು

 ದಿನಾಂಕ 14-06-201 ಸಂಜೆ 4:00 ಗಂಟೆಯಿಂದ ದಿನಾಂಕ 15-06-2021 ರ ಸಂಜೆ 4:00 ಗಂಟೆಯ ಅವದಿಯಲ್ಲಿ  ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾದ ಪ್ರಕರಣಗಳ ಸಂಕ್ಷಿಪ್ತ ವರದಿ.

 

ಹಲ್ಲೆ ಮತ್ತು ಪ್ರಾಣ ಬೆದರಿಕೆ :

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಪ್ರಾಣಬೆದರಿಕೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.   ಕೋಲಾರ ನಗರದ  ಜಮಲ್ಶಾನಗರ, ಬಳಿ ಘಟನೆ ಸಂಬವಿಸಿರುತ್ತದೆ. ದಿನಾಂಕ:-15/06/2021 ರಂದು  ಗಾಯಾಳು ಇರ್ಫಾನ್ @ ಇರ್ಫಾನ್ ಪಾಷ  ಬಿನ್ ಅಲ್ಲಾ ಬಕಾಷ್, ಜಮಾಲ್ ಷಾ ನಗರ ಕೋಲಾರ  ನಗರ ರವರು ಆರ್.ಎಲ್. ಜಾಲಪ್ಪ ಆಸ್ಪತ್ರೆಯ ವೈದ್ಯರ ಸಮಕ್ಷಮ ನೀಡಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ  ತನ್ನ ಸ್ವಂತ ಸ್ಥಳ ಬಂಗಾರಪೇಟೆ ನಗರ, ಭೋವಿ ನಗರವಾಗಿದ್ದು  ಈಗ್ಗೆ 7 ವರ್ಷಗಳ ಹಿಂದೆ ಜಮಾಲ್ ಷಾ ನಗರದ ನಾಜಿಯಾ ಎಂಬುವರನ್ನು ಮದುವೆ ಮಾಡಿಕೊಂಡು  ಜಮಾಲ್ ಷಾ ನಗದಲ್ಲಿಯೇ ವಾಸವಾಗಿರುತ್ತೇನೆ. ತಾನು  ಕೋಲಾರ ನಗರ ಎ.ಪಿ.ಎಂ.ಸಿ ಮಾರ್ಕೆಟ್ ನಲ್ಲಿ ಕೂಲಿ ಕೆಲಸ ಮಾಡುತ್ತಿರುತ್ತೇನೆ.  ದಿನಾಂಕ:-13/06/2021 ರಂದು ಬೆಳಿಗ್ಗೆ  ಮಾರ್ಕೆಟ್ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗಲು ಸಂಜೆ 4-00 ಗಂಟೆಯಲ್ಲಿ ಮಾರ್ಕೆಟ್ ಬಳಿ ಇದ್ದಾಗ ಜಮಾಲ್ ಷಾ ನಗರದ ಅಕ್ಬರ್ ಎಂಬುವನು ಆಟೋ ಓಡಿಸಿಕೊಂಡು ಬಂದಿದ್ದು   ತಾನು ಆಟೋವನ್ನು ನಿಲ್ಲಿಸಿ ಜಮಾಲ್ ಷಾ ನಗರಕ್ಕೆ ಹೋಗಬೇಕೆಂದು ಕೇಳಿದ್ದರಿಂದ  ಆತ 80 ರೂ ಆಗುತ್ತೆಂದು ಹೇಳಿದ ತಾನು ಕೊಡುತ್ತೇನೆಂದು ಆಟೋದಲ್ಲಿ ಕುಳಿತುಕೊಂಡೆ ಆತ ಆಟೋ ಓಡಿಸಿಕೊಂಡು ಬ್ರಿಡ್ಜ್ ಹತ್ತಿರ ಜಮಾಲ್ ಷಾ ನಗರ ಕಡೆ ಹೋಗುತ್ತಿದ್ದಾಗ ಆಟೋ ನಿಂತಿದ್ದು ತಾನು ಏಕೆ ಎಂದು ಕೇಳಿದ್ದಕ್ಕೆ ಆಟೋದಲ್ಲಿ ಗ್ಯಾಸ್ ಖಾಲಿಯಾಗಿದೆ  ಬೇರೆ ಆಟೋದಲ್ಲಿ ಹೋಗು ಎಂದ ತಾನು ಆಟೋದಿಂದ ಇಳಿದಾಗ ಆತ ಹಣ ಕೊಡು ಎಂದು ಕೇಳಿದ ಆಗ ತಾನು ನನ್ನನ್ನು ಮನೆಯ ಬಳಿ ಬಿಟ್ಟಿಲ್ಲ  ಏಕೆ ಹಣ ಕೊಡಬೇಕು ಎಂದು ಕೇಳಿದಾಗ ಇಬ್ಬರಿಗೂ ಬಾಯಿ ಮಾತಿನ ಜಗಳವಾಗಿರುತ್ತೆ. ಆಗ ಅಕ್ಬರ್ ನೀನು ಹಣ ಕೊಟ್ಟಿಲ್ಲ ನಿನಗೆ ಒಂದು ಗತಿ ಕಾಣಿಸುತ್ತೇನೆಂದು ಆತನ ಬಳಿಯಿಂದ ಚಾಕುವನ್ನು ತೆಗೆದು ಹಣ ಕೊಡದೆ ಇದ್ದರೆ ಸಾಯಿಸುತ್ತೇನೆಂದು ಬೆದರಿಸಿದ ತಾನು ಹಣ ಕೊಡುವುದಿಲ್ಲವೆಂದು  ಹೇಳಿದಾಗ ನಿನ್ನನ್ನು ಕೊಲೆ ಮಾಡದೆ ಬಿಡುವುದಿಲ್ಲವೆಂದು ಚಾಕುವಿನಿಂದ ಹೊಟ್ಟೆಗೆ ತಿವಿದು ತೀವ್ರ ಸ್ವರೂಪದ ಗಾಯವನ್ನುಂಟು ಮಾಡಿ ಕೊಲೆ ಪ್ರಯತ್ನ  ಮಾಡಿದ ತನಗೆ ವಿಪರೀತ ರಕ್ತಸ್ರಾವವಗಿದ್ದು ಕೆಳಗೆ ಬಿದ್ದಾಗ ತನ್ನ ಹೆಂಡತಿಯ ಅಣ್ಣ ಯಾಸೀನ್ @ ಯಾಸೀನ್ ಬೇಗ್  ಇತರರು ಉಪಚರಿಸಿ ಎಸ್.ಎನ್.ಆರ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ವೈದ್ಯರು ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದರಿಂದ ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ. ತನ್ನ ಪ್ರಜ್ಞೆ ಇಲ್ಲದೆ ಇದ್ದುರಿಂದ  ಹಾಗೂ ಶಸ್ತ್ರ ಚಿಕಿತ್ಸೆ ಆಗಿದ್ದರಿಂದ ಹೇಳಿಕೆಯನ್ನು ಕೊಡಲು ಸಾದ್ಯವಾಗದೆ ಇದ್ದು ದಿನಾಂಕ:-15/06/2021 ರಂದು ಚೇತರಿಸಿಕೊಂಡು ಹೇಳಿಕೆಯನ್ನು ನೀಡಿರುತ್ತೇನೆ. ತನ್ನ ಮೇಲೆ ಕೊಲೆ ಪ್ರಯತ್ನ ಮಾಡಿರುವ ಅಕ್ಬರ್ ವಿರುದ್ದ ಕಾನೂನು ರೀತ್ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.

 

ಇತ್ತೀಚಿನ ನವೀಕರಣ​ : 15-06-2021 04:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080