ಅಭಿಪ್ರಾಯ / ಸಲಹೆಗಳು

ದಿನಾಂಕ 27-09-201 ಸಂಜೆ 4:00 ಗಂಟೆಯಿಂದ ದಿನಾಂಕ 28-09-2021 ಸಂಜೆ 4:00 ಗಂಟೆಯ ಅವದಿಯಲ್ಲಿ  ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾದ ಪ್ರಕರಣಗಳ ಸಂಕ್ಷಿಪ್ತ ವರದಿ.

 

ಅಕ್ರಮ ಜಾನುವಾರು ಸಾಗಾಣಿಕೆ : ಜಾನುವಾರು ಸಮೇತ ಇಬ್ಬರ ವಶ.

ವೇಮಗಲ್ ಪೊಲೀಸ್ ಠಾಣೆಯಲ್ಲಿ ಅಕ್ರಮ ಜಾನುವಾರು ಸಾಗಾಣಿಕೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 28/09/2021 ರಂದು ಬೆಳಿಗ್ಗೆ 11-30 ಗಂಟೆಗೆ ಪಿ.ಐ ಸಾಹೇಬರು ಠಾಣೆಯಲ್ಲಿ ನೀಡಿದ  ದೂರಿನ ಸಾರಾಂಶವೇನೆಂದರೆ, ಈ  ದಿನ ಬೆಳಿಗ್ಗೆ 8.00 ಗಂಟೆ ಸಮಯದಲ್ಲಿ  ಪಿ.ಐ ಸಾಹೇಬರು  ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಸಮಯಕ್ಕೆ ಚತ್ತಿಸ್ ಗಡ್ ರಾಜ್ಯದಿಂದ ಎರಡು ಈಚರ್ ವಾಹನಗಳಲ್ಲಿ ಸೀಮೆ ಹಸುಗಳನ್ನು ತುಂಬಿಕೊಂಡು ಹೆಚ್. ಕ್ರಾಸ್ ಕೋಲಾರ ಮಾರ್ಗವಾಗಿ ವಕ್ಕಲೇರಿ ಫಾರಂ ಗೆ ಸಾಗಾಟ ಮಾಡಲು ಹೆಚ್.ಕ್ರಾಸ್ ಬಿಟ್ಟು ವಾಹನಗಳು ಬರುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ  ಅವರು  ಮತ್ತು ಠಾಣಾ ಸಿಬ್ಬಂದಿ ಸಿಪಿಸಿ-312 ಮಹೇಶ್ ಹಾಗೂ ಜೀಪ್ ಚಾಲಕ ಎಪಿಸಿ-457 ನಾಗೇಶ್ ರವರು ಸರ್ಕಾರಿ ಜೀಪಿನ ಸಂಖ್ಯೆ: ಕೆಎ-07-ಜಿ-730 ವಾಹನದಲ್ಲಿ ಠಾಣೆಯಿಂದ ಹೊರಟು ಬೆಳಿಗ್ಗೆ 8.15 ಗಂಟೆಗೆ ವೇಮಗಲ್-ಹೆಚ್.ಕ್ರಾಸ್ ರಸ್ತೆಯ ಮಲಿಯಪ್ಪನಹಳ್ಳಿ ಗೇಟಿನ ಬಳಿ ಹೋಗುತ್ತಿದ್ದಾಗ ಎದುರುಗಡೆಯಿಂದ ಎರಡು ಈಚರ್ ವಾಹನಗಳು ಬಂದಿದ್ದುಪೊಲೀಸ್ ಜೀಪನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸಿ ಈಚರ್ ವಾಹನಗಳನ್ನು ನಿಲ್ಲಿಸಲು ಸೂಚಿಸಿ ವಾಹನಗಳು ನಿಲ್ಲಿಸಿದ ನಂತರ ಒಂದು ಈಚರ್ ವಾಹನವನ್ನು ನಿಲ್ಲಿಸಿ, ನಂಬರ್ ನೋಡಲಾಗಿ, CG-08-U-8324   ನಂಬರ್ ಆಗಿದ್ದು, ವಾಹನ ಹಿಂಭಾಗ ಟಾರ್ಪಲ್  ಕಟ್ಟಿದ್ದು, ಟಾರ್ಪಲ್ ಅನ್ನು  ತೆಗೆಯಿಸಿ ನೋಡಲಾಗಿ  ವಾಹನದಲ್ಲಿ 10 ಕಪ್ಪು ಬಿಳಿ ಮಿಶ್ರಿತ ಸೀಮೆ ಹಸುಗಳು  ಇದ್ದು, ಆ ಪೈಕಿ 05 ಹಸುಗಳು ಸತ್ತು ಹೊಗಿರುವುದು ಕಂಡು ಬಂದಿದ್ದು, ದುರ್ವಾಸನೆ ಬರುತ್ತಿರುತ್ತೆ. ವಾಹನ ಚಾಲಕನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ KAMTA PRASAD DESHLAHRA S/O DHARAM DASS DESHLAHRA, 46 YEARS AGE, SATNAMI CASTE, DRIVER, AND OWNER,  R/O MTIPURA VILLAGE, WARD NO:06,  CHIKLI CHOWKI, RAJNANDGAON TALUK & DISTRICT,  CHATTISGHAR STATE,  PIC CODE, 491441 MOBILE NO 9753224273 , 9424151378  ಆಗಿದ್ದು,  ಹಸುಗಳ ಸಾಗಾಣಿಕೆಗೆ ಪರವಾನಿಗೆ ಕೇಳಲಾಗಿ ಪರವಾನಿಗೆಯನ್ನು ಹಾಜರುಪಡಿಸಿರುತ್ತಾರೆ. ಮತ್ತೊಂದು ಈಚರ್ ವಾಹನವನ್ನು ಪರಿಶೀಲಿಸಲಾಗಿ  CG-05-AB-1645 ನಂಬರ್ ಆಗಿದ್ದು, ವಾಹನ ಹಿಂಭಾಗ ಟಾರ್ಪಲ್  ಕಟ್ಟಿದ್ದು, ಟಾರ್ಪಲ್ ಅನ್ನು  ತೆಗೆಯಿಸಿ ನೋಡಲಾಗಿ  ವಾಹನದಲ್ಲಿ 10 ಕಪ್ಪು ಬಿಳಿ ಮಿಶ್ರಿತ ಸೀಮೆ ಹಸುಗಳು  ಇದ್ದು, ಆ ಪೈಕಿ 02 ಹಸುಗಳು ಸತ್ತು ಹೊಗಿರುವುದು ಕಂಡು ಬಂದಿದ್ದು, ದುರ್ವಾಸನೆ ಬರುತ್ತಿರುತ್ತೆ. ವಾಹನ ಚಾಲಕನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ RAMESHWAR SAAHU S/O DHANUK SAAHU, 30 YEARS, SAAHU BY CASTE, OWNER & DRIVER, R/O  H.NO: 218/04, WARD NO: 04, AMBEDKAR CHOWK, KRISHNA NAGAR,  SUPELA TALUK  DURG DISTRIC, CHATTISGARH STATE, ಎಂತ ತಿಳಿಸಿದ್ದು, ಹಸುಗಳ ಸಾಗಾಣಿಕೆಗೆ ಪರವಾನಿಗೆ ಕೇಳಲಾಗಿ ಪರವಾನಿಗೆಯನ್ನು ಹಾಜರುಪಡಿಸಿರುತ್ತಾರೆ. ಹಸುಗಳನ್ನು ಛತ್ತೀಸ್ ಘಡ ರಾಜ್ಯದ ಬಿಲಾಸ್ ಪುರದಲ್ಲಿ ದಿನಾಂಕ: 25/09/2021 ರಂದು  ವಾಹನಗಳಲ್ಲಿ ತುಂಬಿಸಿಕೊಂಡು ಬರುತ್ತಿರುವುದಾಗಿ ತಿಳಿಸಿದರು.  ಹಸುಗಳಿಗೆ ಸೂಕ್ತ ಆಹಾರ ನೀರು, ನೀಡದೆ ವಿಶ್ರಾಂತಿ ಇಲ್ಲದೆ ಕಾರಣ, ನಿಗದಿಗಿಂತ ಹೆಚ್ಚಿಗೆ ಹಸುಗಳನ್ನು ತುಂಬಿಸಿಕೊಂಡಿರುವುದ್ದರಿಂದ  ಸಾಗಾಟ ವೇಳೆ ವಾಹನದಲ್ಲಿಯೇ ಹಸುಗಳು ಮೃತಪಟ್ಟಿದ್ದರೂ ಸಹ  ಸಾಗಾಟ ಮಾಡಿರುತ್ತಾರೆ. ಸ್ಥಳದಲ್ಲಿ ಪಂಚರ ಸಮಕ್ಷಮ  ಪಂಚನಾಮೆ ಕ್ರಮಗಳನ್ನು ಜರುಗಿಸಿ  ಹಸುಗಳ ಸಮೇತ ವಾಹನಗಳನ್ನು  ಮತ್ತು ಮೇಲ್ಕಂಡ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ವಾಪಸ್ ಬಂದು ಈ ಬಗ್ಗೆ ಮುಂದಿನ ಕ್ರಮ ಜರುಗಿಸಲು ಸೂಚಿಸಿದ ದೂರು.

ಇತ್ತೀಚಿನ ನವೀಕರಣ​ : 28-09-2021 06:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080