ಅಭಿಪ್ರಾಯ / ಸಲಹೆಗಳು

ದಿನಾಂಕ 23-09-201 ಸಂಜೆ 4:00 ಗಂಟೆಯಿಂದ ದಿನಾಂಕ 24-09-2021 ಸಂಜೆ 4:00 ಗಂಟೆಯ ಅವದಿಯಲ್ಲಿ  ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾದ ಪ್ರಕರಣಗಳ ಸಂಕ್ಷಿಪ್ತ ವರದಿ.

 

 

ಕಳವು:

ಕೋಲಾರ ನಗರ ಪಲೀಸ್ ಠಾಣೆಯಲ್ಲಿ ಕಳವಿಗೆ ಸಂಬಂದಿಸಿದಂತೆ ಪ್ರಕರನ ದಾಖಲಾಗಿರುತ್ತದೆ, ಕೋಲಾರ ನಗರದ  ಅಂತರಗಂಗೆ ರಸ್ತೆ, ಪ್ರಥಮ ದರ್ಜೆ ಕಾಲೇಜು ಪಕ್ಕ ಘಟನೆ ಸಂಬವಿಸಿರುತ್ತದೆ,  ದಿನಾಂಕ 23/09/2021 ರಂದು 16-00 PM  ಗಂಟೆಗೆ ಕೋಲಾರ ನಗರಸಭೆ ಕಾರ್ಯಾಲಯದಿಂದ ಟಪಾಲು ಮೂಲಕ ಪೌರಾಯುಕ್ತರು,ಕೋಲಾರ ನಗರ ಸಭೆ ಕೋಲಾರ ರವರು ರವಾನಿಸಿರುವ ದೂರಿನ ಸಾರಾಂಶವೆಂದರೆ,   ಕೋಲಾರ ನಗರಸಭೆಗೆ ಸೇರಿದ ವಾರ್ಡ ನಂ 9 ರ ವ್ಯಾಪ್ತಿಯಲ್ಲಿನ ಪ್ರಥಮ ದರ್ಜೆ ಸರ್ಕಾರಿ ಕಾಲೇಜಿನ ಮುಂಭಾಗದಲ್ಲಿರುವ ಸರ್ವಜ್ಞ ಪಾರ್ಕ ನಲ್ಲಿ ಬೆಳೆದು ನಿಂತಿದ್ದ ಶ್ರೀಗಂದ ಮರವನ್ನು  ದಿನಾಂಕ 22/09/2021 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು  ಕತ್ತರಿಸಿ ಕಳವು  ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕಳ್ಳರನ್ನು ಪತ್ತೆ ಮಾಡಿ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರ ವ ವರದಿ.  ( ಹೆಚ್ಚಿನ ವಿವರಗಳಿಗೆ ಅಸಲು ಪಿರ್ಯಾದು ಲಗತ್ತಿಸಿರುತ್ತೆ.)

 

ವ್ಯಕ್ತಿ ಕಾಣೆಯಾಗಿರುವ ಬಗ್ಗೆ :

ಮುಲಬಾಗಿಲು ಪೊಲೀಸ್ ಠಾಣೆಯಲ್ಲಿ  ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ, ಮುಳಬಾಗಿಲು ನಗರ ಪಾತಕೋಲಟೆ, ಪಳ್ಳಿಗರ ಪಾಳ್ಯದಲ್ಲಿ ಘಟನೆ ಸಂಬವಿಸಿರುತ್ತದೆ. ದಿನಾಂಕ:23/09/2021 ರಂದು ಪಿರ್ಯಾದಿದಾರರಾದ ಶ್ರೀಮತಿ.ಶಕುಂತಲ ಕೋಂ ಶ್ರೀನಿವಾಸ, 22ವರ್ಷ, ತಿಗಳರು,ಗೃಹಿಣಿ, ವಾಸ:ಪಾತಕೋಟೆ, ಪಳ್ಳಿಗರಪಾಳ್ಯ,ಮುಳಬಾಗಲು ನಗರ ರವರು ದೂರಿನ ಸಾರಾಂಶ ಏನೆಂದರೆ, ತನ್ನ ಗಂಡನ ಹೆಸರು ಶ್ರೀನಿವಾಸ, 25ವರ್ಷ ರವರು ಸ್ವಂತ ತನ್ನ ಸೋದರಮಾವನಾಗಿದ್ದು,ಈಗ್ಗೆ ಸುಮಾರು 2ವರ್ಷಗಳ ಹಿಂದೆ ತಮ್ಮಬ್ಬಿರಿಗೆ ಹಿರಿಯರು ಮಾತುಕತೆ ಮಾಡಿ ತಮ್ಮ ಸಂಪ್ರದಾಯದಂತೆ ಮದುವೆಮಾಡಿರುತ್ತಾರೆ. ತಾವು ಸುಮಾರು 6ತಿಂಗಳಿಂದ ಮೇಲ್ಕಂಢ ವಿಳಾಸದಲ್ಲಿ ತಾನು ತನ್ನ ಗಂಡ ಅನ್ಯೋನ್ಯವಾಗಿ ಜೀವನ ಮಾಡುತ್ತಿದ್ದು,ತಮಗೆ 6ತಿಂಗಳ ಹೆಣ್ಣುಮಗು ಸಹ ಇರುತ್ತೆ. ಈಗಿರುವಾಗ ತನ್ನ ಗಂಡ ದಿನಾಂಕ:20/09/2021 ರಂದು ರಾತ್ರಿ ಸುಮಾರು 8-30ಗಂಟೆಗೆ ಮನೆಯಿಂದ ಹೊರಗೆ ಹೋದವರು ಮದ್ಯ ರಾತ್ರಿ ಯಾದರು ಮನೆಗೆ ವಾಪಸ್ಸು ಬಂದಿರುವುದಿಲ್ಲ ನಂತರ ಮನೆಯಲ್ಲಿ ತಮ್ಮ ಹಿರಿಯರಿಗೆ ತಿಳಿಸಿ ಹುಡುಕಾಡಲಾಗಿ ತನ್ನ ಗಂಡನ ಮೊಬೈಲ್ ಮನೆಯಲ್ಲಿಟ್ಟಿದ್ದು, ತಮ್ಮ ತಾತ ರವರು ತನಗೆ ನೀಡಿದ್ದ ಎರಡು ಲಕ್ಷ ಹಣ ಮತ್ತು ತನ್ನ ಬಂಗಾರದ ವಡವೆಗಳು ಕಾಣಲಿಲ್ಲ ತನ್ನ ಗಂಡ ತೆಗೆದುಕೊಂಡು ಹೋಗಿರುತ್ತಾನೆ. ತನ್ನ ಗಂಡನನ್ನು ತಮ್ಮ ಸಂಭಂದಿಕರ ಮನೆಗಳಲ್ಲಿ ಹಾಗೂ ಇತರೆ ಕಡೆಗಳಲ್ಲಿ ಹುಡುಕಾಡಲಾಗಿ ಎಲ್ಲಿ ಸಿಗಲಿಲ್ಲ ಆದ್ದರಿಂದ ಕಾಣೆಯಾದ ತನ್ನ ಗಂಡನನ್ನು ಹುಡುಕಿಕೊಡಲು ಕೋರಿ ನೀಡಿದ ದೂರು(ಅಸಲು ದೂರನ್ನು ಲಗತ್ತಿಸಿರುತ್ತೆ)    

ಕಾಣೆಯಾಗಿರುವವರ ವಿವರ: ಹೆಸರು:ಶ್ರೀನಿವಾಸ, 25ವರ್ಷ, ಗಾರೆಕೆಲಸ, 5ಅಡಿ ಎತ್ತರ, ಉದ್ದಮುಖ, ಎಣ್ಣೆಗೆಂಪು ಮೈಬಣ್ಣ, ಸಾದಾರಣ ಮೈಕಟ್ಟು, ಕನ್ನಡ, ತೆಲುಗು ಭಾಷೆ ಮಾತನಾಡುತ್ತಾನೆ. ಮನೆಯಿಂದ ಹೋಗುವಾಗ ಹಸಿರುಬಣ್ಣದ ಪುಲ್ ಶರ್ಟ್,ಕಪ್ಪುಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.

ಇತ್ತೀಚಿನ ನವೀಕರಣ​ : 24-09-2021 04:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080