ಅಭಿಪ್ರಾಯ / ಸಲಹೆಗಳು

ದಿನಾಂಕ 21-06-201 ಸಂಜೆ 4:00 ಗಂಟೆಯಿಂದ ದಿನಾಂಕ 22-06-2021 ಸಂಜೆ 4:00 ಗಂಟೆಯ ಅವದಿಯಲ್ಲಿ  ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾದ ಪ್ರಕರಣಗಳ ಸಂಕ್ಷಿಪ್ತ ವರದಿ.

 

ಕಳವು : 

ಮುಳಬಾಗಿಲು  ನಗರ ಪೊಲೀಸ್ ಠಾಣೆಯಲ್ಲಿ  ಕಳವಿಗೆ ಸಂಬಂದಿಸಿದಂತೆ ಪ್ರಕರಣ ದಾಕಲಾಗಿರುತ್ತದೆ. ಮುಳಬಾಗಿಲು ನಗರದ ಮುತ್ಯಾಲಪೇಟೆಯ ದೊಡ್ಡಬೈರೇಗೌಡ ಮನೆಯಲ್ಲಿ ಘಟನೆ ಸಂಬವಿಸಿರುತ್ತದೆ. ಸದರಿ ವಿಳಾಸದ ವಾಸಿಯಾದ  ಗೌರಿಶಂಕರ್ ಬಿನ್ ವೆಂಕಟೇಶಯ್ಯ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯ ಬಾಬತ್ತು ದ್ವಿಚಕ್ರ ವಾಹನ ಕೆ.ಎ. 07 ಇ.ಸಿ. 5867 ರಾಯಲ್ ಎನ್ಪೀಲ್ಡ್ ವಾಹನವನ್ನು ದಿನಾಂಕ 22-06-20201 ರಂದು ರಾತ್ರಿ   ನಗರದ ಮುತ್ಯಾಲಪೇಟೆಯ ದೊಡ್ಡಬೈರೇಗೌಡ ನಿಲಯದ ಮುಂದೆ ನಿಲ್ಲಿಸಿ ಬೀಗ ಹಾಕಿ ರಾತ್ರಿ ಮಲಗಿ ಬೆಳಗಿನ ಜಾವ ೆದ್ದು ನೋಡಲಾಗಿ ಯಾರೋ  ಕಳ್ಳರು ಸದರಿ ದ್ವಿಚಕ್ರ ವಾಹನವನ್ನು ಕಳವು ಮಾಡಿ ಪರಾರಿಯಾಗಿರುತ್ತಾರೆ. ಎಂದು ದೂರು ದಾಖಲಿಸಿರುತ್ತಾರೆ ಸದರಿ ದ್ವಿಚಕ್ರ ವಾಹನದ ಬೆಲೆ  ರೂ 60,000  ಗಳೆಂದು ಉಲ್ಲೇಖಿಸಿರುತ್ತಾರೆ.

 

ಮಾರಣಾಂತಿಕ ರಸ್ತೆ ಅಪಘಾತ :

ವೇಮಗಲ್ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲುಕು , ವೇಮಗಲ್ ಮತ್ತು ಎಚ್ ಕ್ರಾಸ್ ರಸ್ತೆ, ನಿಯರ್ ಕುರುಗಲ್ ಗೇಟ್ ಬಳಿ ಘಟನೆ ಸಂಬವಿಸಿರುತ್ತದೆ. ಮುನುಕ್ರಿಷ್ಣಪ್ಪ ಬಿನ್ ಹನುಮಪ್ಪ  ಹುಲ್ಲುನ್ ಕಲ್ಲು  ಗ್ರಾಮ, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಪಿರ್ಯಾದಿಯ ತಂದೆ ಹನುಮಪ್ಪ ಎಂಬುವರು ಗಾರೆ ಕೆಲಸ ಮಾಡುತ್ತಿದ್ದು ಕೆಲಸ ಮುಗಿಸಿಕೊಂಡು ತನ್ನ ಬಾಬತ್ತು ದ್ವಿಚಕ್ರ ವಾಹನದ ಇಂಜಿನ್ ಸಂಖ್ಯೆ : ಬಿ.ಪಿ.ಎಲ್.ಎ.ಎಮ್.1232246   ಸದರಿ ದ್ವಿಚಕ್ರ ವಾಹನದಲ್ಲಿ ಕೋಲಾರ ತಾಲ್ಲುಕು , ವೇಮಗಲ್ ಮತ್ತು ಎಚ್ ಕ್ರಾಸ್ ರಸ್ತೆ, ನಿಯರ್ ಕುರುಗಲ್ ಗೇಟ್ ಬಂದಾಗ   ಅದೇ ಸಮಯಕ್ಕೆ ಕೋಲಾರ ಕಡೆಯಿಂದ ಕೆ.ಎ 0 ಎ,ಎ, 2469 ಸ್ವಿಪ್ಟ್ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು  ಪಿರ್ಯಾದಿಯ ತಂದೆಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಉಂಟುಮಾಡಿ, ವಾಹನ ನಿಲ್ಲಿಸದೆ ಅಲ್ಲಿಂದ ಪರಾರಿಯಾಗಿದ್ದು,ಅಪಘಾತದ ಪರಿಣಾಮ ಪಿರ್ಯಾದಿಯ ತಂದೆಗೆ ಕಾಲು ಎದೆ ಬಾಗಕ್ಕೆ ತೀವ್ರ ಗಾಯವಾಗಿದ್ದು ಚಿಕಿತ್ಸೆಗೆ ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿದ್ದು  ಚಿಕಿತ್ಸೆ ಪಲಕಾರಿಯಾಗದೇ ದಿನಾಂಕ 23-06-2021 ರಂದು ಮೃಪಪಟ್ಟಿರುತ್ತಾರೆ.

ಇತ್ತೀಚಿನ ನವೀಕರಣ​ : 23-06-2021 04:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080