ಅಭಿಪ್ರಾಯ / ಸಲಹೆಗಳು

ದಿನಾಂಕ 15-06-201 ಸಂಜೆ 4:00 ಗಂಟೆಯಿಂದ ದಿನಾಂಕ 16-06-2021 ರ ಸಂಜೆ 4:00 ಗಂಟೆಯ ಅವದಿಯಲ್ಲಿ  ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾದ ಪ್ರಕರಣಗಳ ಸಂಕ್ಷಿಪ್ತ ವರದಿ.

 

ಮಾರಣಾಂತಿಕ ರಸ್ತೆ ಅಪಘಾತ :

ವೇಮಗಲ್ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರನಣ ದಾಖಲಾಗಿರುತ್ತದೆ. ನಿಯರ್ ಪ್ರೇಮ ಸೇವ ನಗರ ಶಾಲೆ ಮಾಲೂರು ರಸ್ತೆ, ನರಸಾಪುರ. ಬಳಿ ಘಟನೆ ಸಂಬವಿಸಿರುತ್ತದೆ. ದಿನಾಂಕ: 16/06/2021 ರಂದು ಬೆಳಿಗ್ಗೆ  11-15 ಗಂಟೆಗೆ  ಪಿರ್ಯಾದಿ ಶ್ರೀಮತಿ  ರೇಷ್ಮಾತಾಜ್ ಕೊಂ  ಸೈಯ್ಯದ್ ಇಲಿಯಾಜ್ @ ಇಲ್ಲು,  38 ವರ್ಷ, ಮುಸ್ಲೀಮರು, ಗೃಹಿಣಿ, ರಾಜೀವ್ ನಗರ,  ಮಾಲೂರು ಟೌನ್ 9353022937 ರವರು  ಠಾಣೆಯಲ್ಲಿ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ,  ಪಿರ್ಯಾದಿ  ಈಗ್ಗೆ ಸುಮಾರು 20 ವರ್ಷಗಳ ಹಿಂದೆ  ಮಾಲೂರು ಟೌನ್ ನಲ್ಲಿ ವಾಸವಾಗಿರುವ  ಸೈಯ್ಯದ್ ಇಲಿಯಾಜ್ @ ಇಲ್ಲು  ಬಿನ್ ಲೇಟ್ ಸೈಯ್ಯದ್ ಅಮೀರ್ ಎಂಬುವರನ್ನು ಮದುವೆ ಮಾಡಿಕೊಂಡಿದ್ದು,    1ನೇ  ಸುಮಾರು 19 ವರ್ಷದ  ಸೈಯ್ಯದ್ ಅಪ್ರಿದಿ, 2ನೇ  18 ವರ್ಷದ  ಆಪ್ರಿನ್ ತಾಜ್  ಎಂಬ ಇಬ್ಬರು ಮಕ್ಕಳು ಇದ್ದು, ನನ್ನ ಗಂಡ ಪೈಂಟಿಂಗ್ ಕೆಲಸ ಮಾಡಿಕೊಂಡು ನಮಗೆ ಸಾಕುತ್ತಿರುತ್ತಾರೆ.   ಪಿರ್ಯಾದಿ, ಆಕೆಯ  ಗಂಡ ಮತ್ತು ಮಕ್ಕಳು  ಮಾಲೂರು ಟೌನ್ ನಲ್ಲಿರುವ ರಾಜೀವ್ ನಗರದ ಮುಬಿನಾ ರವರ  ಬಾಡಿಗೆ ಮನೆಯಲ್ಲಿ ವಾಸವಾಗಿದ್ದು,  ಹೀಗಿರುವಾಗ ದಿನಾಂಕ: 13/06/2021 ರಂದು  ಬೆಳಿಗ್ಗೆ   ಪಿರ್ಯಾದಿ  ಗಂಡ ಮಾಲೂರು ತಾಲ್ಲೂಕು ಸೀತಪ್ಪನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಅವರ ಅಕ್ಕ ಹಸೀನಾ ರವರ ಮನೆಗೆ KA-08-Y-8587  SUZUKI ACCESS  ದ್ವಿಚಕ್ರ ವಾಹನದಲ್ಲಿ  ಹೋಗಿದ್ದರು. ಅದೇ ದಿನ ಸಂಜೆ ಸುಮಾರು 4-30 ಗಂಟೆಯ ಸಮಯದಲ್ಲಿ   108 ಆಂಬ್ಯೂಲೇನ್ಸ್   ವಾಹನದವರು    ಗಂಡನ ಮೊಬೈಲ್ ನಿಂದ  ಪಿರ್ಯಾದಿಗೆ  ಪೋನ್ ಮಾಡಿ,    ಗಂಡನಿಗೆ  ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ  ಪ್ರೇಮ್ ಸೇವಾನಗರದ ಬಳಿ ರಸ್ತೆಯ ಹಂಪ್ಸ್  ಹತ್ತಿರ  ಅಪಘಾತವಾಗಿ ತಲೆಗೆ ಮತ್ತಿತರ ಕಡೆಗಳಲ್ಲಿ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಕೋಲಾರ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ  ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು, ಆಗ ಕೂಡಲೇ  ಅವರು  ಕೋಲಾರ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು,   ಗಂಡನಿಗೆ ತಲೆಗೆ ಭಾರಿ ರಕ್ತಗಾಯವಾಗಿ, ಕೈಕಾಲುಗಳಿಗೆ, ಮುಖಕ್ಕೆ ತರಚಿದ ಗಾಯಗಳಾಗಿದ್ದು,    ಗಂಡರವರು  ಪ್ರಜ್ಞಾ ಹೀನ ಸ್ಥಿತಿಯಲ್ಲಿ ತಿವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,  ನಂತರ ವಿಚಾರ ತಿಳಿಯಲಾಗಿ  ಪಿರ್ಯಾದಿಯ  ಗಂಡ  ದಿನಾಂಕ: 13/06/2021 ರಂದು ಬೆಳಿಗ್ಗೆ   ಸೀತಪ್ಪನಹಳ್ಳಿಯಲ್ಲಿ ವಾಸವಾಗಿರುವ ಅವರ ಅಕ್ಕ ಹಸೀನಾ ರವರ ಮನೆಗೆ ಹೋಗಿ ಅಲ್ಲಿಂದ  ಸ್ವಂತ ಕೆಲಸದ ನಿಮಿತ್ತ ಕೋಲಾರಕ್ಕೆ ಹೋಗುವ ಸಲುವಾಗಿ  ಮದ್ಯಾಹ್ನ ಸುಮಾರು  3-30 ಗಂಟೆಯ ಸಮಯದಲ್ಲಿ ಮೇಲ್ಕಂಡ KA-08-Y-8587     ದ್ವಿಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ನರಸಾಪುರ ಕೈಗಾರಿಕಾ  ಪ್ರಧೇಶದಲ್ಲಿರುವ ಪ್ರೇಮ್ ಸೇವಾ ನಗರದ ಮುಂಭಾಗ ಮಾಲೂರು ರಸ್ತೆಯ ಹಂಪ್ಸ್ ಬಳಿ ದ್ವಿಚಕ್ರ ವಾಹನವನ್ನು  ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಹೋದ ಪರಿಣಾಮ ದ್ವಿಚಕ್ರ ವಾಹನದ ಹಂಪ್ಸ್ ಮೇಲೆ ಜಂಪ್ ಆಗಿ ರಸ್ತೆ ಮೇಲೆ ಬಿದ್ದಾಗ  ಗಂಡನಿಗೆ ತಲೆಗೆ  ಭಾರಿ ರಕ್ತಗಾಯವಾಗಿ, ಕೈಕಾಲುಗಳು, ಮತ್ತು ಮುಖಕ್ಕೆ ಸಹ ಗಾಯಗಳಾಗಿರುತ್ತವೆಂದು ತಿಳಿಯಿತು.  ಕೋಲಾರ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ   ಗಂಡ ಸೈಯ್ಯದ್  ಇಲಿಯಾಜ್ @ಇಲ್ಲು  ಬಿನ್ ಲೇಟ್  ಸೈಯ್ಯದ್ ಅಮೀರ್, 42ವರ್ಷ,  ರವರು   ಚಿಕಿತ್ಸೆ ಫಲಕಾರಿಯಾಗದೆ ಈ ದಿನ ದಿನಾಂಕ: 16/06/2021 ರಂದು ಬೆಳಿಗ್ಗೆ  5-00 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.   ಮೃತ ದೇಹವು ಕೋಲಾರ ಆರ್.ಎಲ್. ಜಾಲಪ್ಪ ಆಸ್ಪತ್ರೆಯ ಶವಾಗಾರದಲ್ಲಿದ್ದು,  ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದ ದೂರು.

 

ಯುವತಿ  ಕಾಣೆಯಾಗಿರುವ ಬಗ್ಗೆ:

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುವತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ,  ಕೋಲಾರ ತಾಲ್ಲೂಕು ತೊಂಡಾಲ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ. ಸದರಿ ಗ್ರಾಮದ ವಾಸಿಯಾದ ವೆಂಕಟೇಶಮ್ಮ ಕೊಂ ರಮೇಶ್  ಎಂಬುವರು ದಿ.16/06/2021 ರಂದು ಬೆಳಿಗ್ಗೆ 10:30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದ್ದರ ಸಾರಾಂಶವೇನೆಂದರೆ ಪಿರ್ಯಾದಿದಾರರಿಗೆ ಇಬ್ಬರು ಮಕ್ಕಳಿದ್ದು, 1ನೇ ಗಜೇಂದ್ರ, 2ನೇ ನೀಲಮ್ಮ ಆಗಿದ್ದು, ತನ್ನ ಮಗಳಾದ ಸುಮಾರು 19 ವರ್ಷದ ನೀಲಮ್ಮ ರವರು ನಾಯಕರಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವರೆಗೆ ವ್ಯಾಸಂಗ ಮಾಡಿ ನಂತರ ಮನೆಯಲ್ಲಿಯೇ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು, ದಿ.15/06/2021 ರಂದು ಬೆಳಿಗ್ಗೆ ಸುಮಾರು 9:30 ಗಂಟೆಯಲ್ಲಿ ತಾನು ತನ್ನ ಮಗ ಗಜೇಂದ್ರ ಹಾಗೂ ತನ್ನ ಮಗಳಾದ ನೀಲಮ್ಮ ರವರನ್ನು ಮನೆಯಲ್ಲಿ ಬಿಟ್ಟು ನಂತರ ತಾನು ಕೂಲಿ ಕೆಲಸಕ್ಕೆ ಹೋಗಿ ಮಧ್ಯಾಹ್ನ ಸುಮಾರು 1:30 ಗಂಟೆಯಲ್ಲಿ ತಾನು ಊಟ ಮಾಡಲು ಮನೆಗೆ ಬಂದು ನೋಡಲಾಗಿ ತಮ್ಮ ಮನೆಯಲ್ಲಿ ತನ್ನ ಮಗಳಾದ ನೀಲಮ್ಮ ರವರು ಇರಲಿಲ್ಲ, ನಂತರ ತಾನು ತನ್ನ ಮಗ ಗಜೇಂದ್ರ ರವರನ್ನು ವಿಚಾರ ಮಾಡಲಾಗಿ ಮಧ್ಯಾಹ್ನ ಸುಮಾರು 12:30 ಗಂಟೆಗೆ ಅಮ್ಮನ ಹತ್ತಿರ ಹೋಗಿ ಹುಲ್ಲು ತೆಗೆದುಕೊಂಡು ಬರುತ್ತೇನೆಂದು ಹೇಳಿ ಹೋದವಳು ಇನ್ನೂ ಬರಲಿಲ್ಲವೆಂದು ಹೇಳಿದನು. ನಂತರ ತಾನು ಹಾಗೂ ತಮ್ಮ ಕಡೆಯವರು ತಮ್ಮ ಅಕ್ಕ-ಪಕ್ಕದ ಮನೆಗಳಲ್ಲಿ ಹಾಗೂ ತಮ್ಮ ನೆಂಟರಿಷ್ಟರ ಮನೆಗಳಲ್ಲಿ ವಿಚಾರ ಮಾಡಲಾಗಿ ಎಲ್ಲಿಯೂ ಸಹ ತನ್ನ ಮಗಳು ಪತ್ತೆಯಾಗಲಿಲ್ಲ, ತನ್ನ ಮಗಳಾದ ನೀಲಮ್ಮ ರವರು ಕಾಣೆಯಾಗಿರುವ ವಿಚಾರದಲ್ಲಿ ಮುಳಬಾಗಿಲು ತಾಲ್ಲೂಕು, ಭೀಮಾಪುರ ಗ್ರಾಮದ ವಾಸಿಯಾದ ಚಲಪತಿ ಬಿನ್ ಹನುಮಪ್ಪ ರವರ ಮೇಲೆ ಅನುಮಾನವಿರುತ್ತೆ. ಆದ್ದರಿಂದ ಕಾಣೆಯಾಗಿರುವ ತನ್ನ ಮಗಳನ್ನು ಪತ್ತೆ ಮಾಡಿಕೊಡಲು ಕೋರಿ ದೂರು. ಕಾಣೆಯಾಗಿರುವ ತನ್ನ ಮಗಳ ಚಹರೆ ಗುರ್ತುಗಳು ಹೆಸರು-ನೀಲಮ್ಮ, 19 ವರ್ಷ, 5.5 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡಬಲ್ಲಳು. (ಹೆಚ್ಚಿನ ವಿವರಗಳಿಗೆ ಅಸಲು ದೂರನ್ನು ಲಗತ್ತಿಸಿರುತ್ತೆ.)

ಇತ್ತೀಚಿನ ನವೀಕರಣ​ : 16-06-2021 04:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080