ಅಭಿಪ್ರಾಯ / ಸಲಹೆಗಳು

ದಿನಾಂಕ 09-06-201 ಸಂಜೆ 4:00 ಗಂಟೆಯಿಂದ ದಿನಾಂಕ 10-06-2021 ರ ಸಂಜೆ 4:00 ಗಂಟೆಯ ಅವದಿಯಲ್ಲಿ  ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾದ ಪ್ರಕರಣಗಳ ಸಂಕ್ಷಿಪ್ತ ವರದಿ.

 

ಮಾರಣಾಂತಿಕ ರಸ್ತೆ ಅಪಘಾತ :

 ಮುಳಬಾಗಿಲು ನಗರ ಪೊಲೀಸ್್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಕಳಗಿರುತ್ತದೆ. ದಿನಾಂಕ:09-06-2021 ರಂದು ಪಿರ್ಯಾದಿದಾರರಾದ ಎ.ಶಶಿಕುಮಾರ್ ಬಿನ್ ಅನಂತ ಪದ್ಮನಾಭ ಚಾರ್,26 ವರ್ಷ, ಶ್ರೀವೈಷ್ಣವರು, ವ್ಯವಸಾಯ, ವಾಸ ಕವತನಹಳ್ಳಿ ಗ್ರಾಮ,ಮುಳಬಾಗಲು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶ ಏನೆಂದರೆ,ತಮ್ಮ ತಂದೆ ತಾಯಿಗೆ ತಾನು ಮತ್ತು ತನ್ನ ತಂಗಿ ಪ್ರಗತಿ ಎಂಬ ಇಬ್ಬರು ಮಕ್ಕಳಿದ್ದು, ತನ್ನ ತಂಗಿ ಪ್ರಗತಿ ರವರಿಗೆ ಕೋಲಾರ ನಗರದ ಕಾರಂಜಿ ಕಟ್ಟೆ ವಾಸಿಯಾದ ತಮ್ಮ ಸಂಬಂದಿಕರಾದ ಆನಂದಚಾರಿ ರವರ ಮಗನಾದ ಚಕ್ರಪಾಣಿ ರವರೊಂದಿಗೆ ಮದುವೆ ನಿಶ್ಚಯವಾಗಿ ದಿನಾಂಕ:17-06-2021 ರಂದು ಮದುವೆ ಕಾರ್ಯಕ್ರಮ ಇದ್ದು, ಚಕ್ರಪಾಣಿ ರವರ ಅಣ್ಣನಾದ ಸುದರ್ಶನ್ ರವರು ಮದುವೆ ಲಗ್ನಪತ್ರಿಕೆಗಳನ್ನು ಪ್ರಿಂಟ್ ಮಾಡಿಸಿ ದಿನಾಂಕ:07-06-2021 ರಂದು ತಮ್ಮ ಊರಿಗೆ ಬಂದು ಲಗ್ನ ಪತ್ರಿಕೆಗಳನ್ನು ತಮ್ಮ ಮನೆಯಲ್ಲಿ ನೀಡಿ ನಂತರ ಸಂಜೆ ಕೋಲಾರಕ್ಕೆ ವಾಪಸ್ಸು ಹೋಗಲು ಅವರು ಬಂದಿದ್ದ ನಂ: ಕೆಎ-07 ವೈ-6714 ಹೀರೋ ಡ್ಯುಯೆಟ್ ದ್ವಿಚಕ್ರ ವಾಹನದಲ್ಲಿ ಹೊರಟರು ಅವರು ಹೊರಟ ಅರ್ದ ಗಂಟೆ ನಂತರ ತಮ್ಮ ಗ್ರಾಮದ ಮುನಿಶಾಮಿ ಗೌಡ ಬಿನ್ ನಾರಾಯಣಗೌಡ ರವರು ತನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ಸಂಬಂದಿ  ಸುದರ್ಶನ್ ರವರು ಎನ್.ಹೆಚ್-75 ರಸ್ತೆಯ ಮುಳಬಾಗಲು ಬೈಪಾಸ್ ಸೊಣ್ಣವಾಡಿ ಬ್ರಿಡ್ಜ್ ಸಮೀಪ ಸಂಜೆ ಸುಮಾರು 4:30 ಗಂಟೆಯಲ್ಲಿ ಕೋಲಾರದ ಕಡೆ ನಂ:ಕೆಎ-07 ವೈ-6714 ದ್ವಿಚಕ್ರ ವಾಹನವನ್ನು ಅತಿವೇಗವಾಗಿ ಸವಾರಿ ಮಾಡಿಕೊಂಡು ಹೋಗಿ ರಸ್ತೆಯ ಹಂಪ್ ಮೇಲೆ ಜೋರಾಗಿ ದ್ವಿಚಕ್ರ ವಾಹನವನ್ನು ಹತ್ತಿಸಿದಾಗ ದ್ವಿಚಕ್ರ ವಾಹನ ಅವರ ಹತೋಟಿ ತಪ್ಪಿ ಸುದರ್ಶನ್ ರವರು ಕೆಳಗೆ ಬಿದ್ದು ಹೋಗಿ ಅವರ ಹಣೆ ಮತ್ತು ಮೂಗಿಗೆ ಗಾಯವಾಗಿರುತ್ತೆ ಎಂದು ತಿಳಿಸಿದರು. ಕೂಡಲೇ ತಾನು ಸ್ಥಳಕ್ಕೆ ಬಂದು ಗಾಯಗೊಂಡಿದ್ದ ಸುದರ್ಶನ್ ರವರನ್ನು 108 ಆಂಬುಲೆನ್ಸ್ನಲ್ಲಿ ಹಾಕಿ  ಕೋಲಾರದ ದೇವರಾಜ್ ಅರಸ್ ಮೆಡಿಕಲ್ ಕಾಲೇಜಿಗೆ ಚಿಕಿತ್ಸೆಗೆ ಕಳುಸಿದ್ದು, ನಂತರ ವೈದ್ಯರ ಸಲಹೆಯಂತೆ  ಬೆಂಗಳೂರು ಲೊಟಸ್ ಹಾಸ್ಪಿಟಲ್ ಗೆ ದಾಖಲು ಮಾಡಿದ್ದು ಚಿಕಿತ್ಸೆ ಪಲಕಾರಿಯಾಗದೇ ದಿನಾಂಕ 09-06-021 ರಂದು ಮೃತಪಟ್ಟಿರುತ್ತಾರೆ.

ಇತ್ತೀಚಿನ ನವೀಕರಣ​ : 10-06-2021 04:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080