ಅಭಿಪ್ರಾಯ / ಸಲಹೆಗಳು

ದಿನಾಂಕ 06-07-2021 ಸಂಜೆ 4:00 ಗಂಟೆಯಿಂದ ದಿನಾಂಕ 07-07-2021 ಸಂಜೆ 4:00 ಗಂಟೆಯ ಅವದಿಯಲ್ಲಿ  ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾದ ಪ್ರಕರಣಗಳ ಸಂಕ್ಷಿಪ್ತ ವರದಿ.

 

 

 

ಕಳವು:

ಮಾಲೂರು  ಪೊಲೀಸ್ ಠಾಣೆಯಲ್ಲಿ  ಕಳವಿಗೆ  ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ನಗರ ಆದರ್ಶ ನಗರ  ಸಾಯಿ ಲೇಔಟ್  ವಿಜಿಕುಮಾರ ಮನೆಯ ಬಳಿ  ಘಟನೆ ಸಂಬವಿಸಿರುತ್ತದೆ,  ಸದರಿ ವಿಳಾಸದ ವಾಸಿಯಾದ  ಯಶ್ವಂತ್ ರೆಡ್ಡಿ ಬಿನ್ ವಿಜಯರಾಘವರೆಡ್ಡಿ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯ ಬಾಬತ್ತುಕೆ.ಎ 07 ಇ.ಬಿ.9909 ಹಾಗೂ ಇಂಜಿನ್ ನಂಬರ್ U3S5c1J4824533 ಸಂಖ್ಯೆಯ ಬುಲೆಟ್ ದ್ವಿಚಕ್ರ ವಾಹನವನ್ನು  ದಿನಾಂಕ 06-07-2021ರಂದು ರಾತ್ರಿ ಸದರಿ ದವಿಚಕ್ರ ವಾಹನವನ್ನು ಮನೆಯ ಮುಂದೆ ನಿಲ್ಲಿಸಿ  ಲಾಕ್ ಮಾಡಿದ್ದು ಮರುದಿನ ನೋಡಲಾಗಿ ಯಾರೋ ಅಪರಿಚಿತ ವ್ಯಕ್ತಿಗಳು ಸದರಿ ದ್ವಿಚಕ್ರ ವಾಹನವನ್ನು        ಕಳವು ಮಾಡಿ ಪರಾರಿ ಯಾಗಿರುತ್ತಾರೆ. ಸದರಿ ವಾಹನದ ಬೆಲೆ ಸುಮಾರು ರೂ 1,50,000 ಎಂದು ಪಿರ್ಯಾದಿ ದೂರು ದಾಖಲಿಸಿರುತ್ತಾರೆ.

 

ವ್ಯಕ್ತಿ  ಕಾಣೆಯಾಗಿರುವ ಬಗ್ಗೆ :

ಕೋಲಾರ ಗ್ರಾಮಾಂತರ  ಪೊಲೀಸ್ ಠಾಣೆಯಲ್ಲಿ  ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ ಕೋಲಾರ   ತಾಲ್ಲೂಕು  ಕೊಂಡರಾಜನಹಳ್ಳಿ ಬಳಿ  ಘಟನೆ ಸಂಬವಿಸಿರುತ್ತದೆ, ಸದರಿ ವಿಳಾಸದ ವಾಸಿಯಾದ  ರಾಜೇಶ್ವರಿ ಕೊಂ  ರಘುನಾಥ್ ರೆಡ್ಡಿ   .  ಎಂಬುವರು ದಿನಾಂಕ 07-07-2021 ರಂದು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಪಿರ್ಯಾದಿಯ ಗಂಡ ರಘುನಾಥ್ ರೆಡ್ಡಿ   (30) ವರ್ಷ,ರವರು ಕೋಲಾರದ ಎ.ಪಿ.ಎಂ.ಸಿ ಯಲ್ಲಿ ಕೆಲಸ ಮಾಡುತ್ತಿದ್ದು ದಿನಾಂಕ 22-06-2021 ರಂದು ಎಂದಿನಂತೆ  ಕೆಲಸಕ್ಕೆ ಹೋದವರು ಮರುಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ  ಎಲ್ಲಾ ಕಡೆ ಹಾಗೂ ಎಲ್ಲಾ ಸಂಬಂದಿಕರ ವಿಳಾಸಗಳಲ್ಲಿ ಹುಡುಕಿ ಎಲ್ಲಿಯೂ ಕಾಣದೇ ಇರುವ ಕಾರಣ ತಡವಾಗಿ ದೂರು ದಾಖಲಿಸಿರುತ್ತಾರೆ.

 

ಇತ್ತೀಚಿನ ನವೀಕರಣ​ : 07-07-2021 05:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080