ಅಭಿಪ್ರಾಯ / ಸಲಹೆಗಳು

ದಿನಾಂಕ 02-08-2021 ಸಂಜೆ 4:00 ಗಂಟೆಯಿಂದ ದಿನಾಂಕ 03-08-2021 ಸಂಜೆ 4:00 ಗಂಟೆಯ ಅವದಿಯಲ್ಲಿ  ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾದ ಪ್ರಕರಣಗಳ ಸಂಕ್ಷಿಪ್ತ ವರದಿ.

 

ಯವತಿ ಕಾಣೆ :

 ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಯುವತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ, ಕೋಲಾರ ನಗರದ ಕೋರ್ಟ್ ಸರ್ಕಲ್ ಬಳಿ ಘಟನೆ ಸಂಬವಿಸಿರುತ್ತದೆ, ಶ್ರೀನಿವಾಸಪುರ ತಾಲ್ಲೂಕು. ರೋಣೂರು ಹೋಬಳಿ  ದಾಸತಿಮ್ಮನಹಳ್ಳಿ ಗ್ರಾಮದ ವಾಸಿಯಾದ  ವೆಂಕಟರವಣಪ್ಪ ಬಿನ್ ಲಕ್ಷಣ್ ನಾಯಕ್ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 02-08-2021 ರಂದು ಪಿರ್ಯಾದಿ ತನ್ನ ಹೆಂಡತಿ ಮತ್ತು ಮಗಳು ಸುಮಿತ್ರಾ ಜೊತೆ ಕೋಲಾರದ ನ್ಯಾಯಾಲಯಕ್ಕೆ ಬಂದಿದ್ದು, ಪಿರ್ಯಾದಿ ವಕೀಲರನ್ನು ಮಾತನಾಡಲು ತನ್ನ ಹೆಂಡತಿ ಮಗಳನ್ನು ಹೊರಗಡೆ ಕೂರಿಸಿ ಹೊಗಿದ್ದು,ವಕೀಲರ ಬಳಿ ಹೋಗಿ ಮಾತನಾಡಿ ಬಂದು ನೋಡಲಾಗಿ ಮಗಳು  ಸುಮಿತ್ರಾ (18) ವರ್ಷ,ತನ್ನ ತಾಯಿಗೆ ಬಹಿರ್ದೆಸೆಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಇದೂವರೆಗೂ ಮನೆಗೂ ಬಾರದೇ ಸಂಬಂದಿಕರ ಮನೆಗೆಗೂ ಹೋಗದೇ ಕಾಣೆಯಾಗಿರುತ್ತಾಳೆ ಎಂದು ದೂರು ದಾಖಲಿಸಿರುತ್ತಾರೆ.

 

ಕಳವು :

ಮಾಲೂರು ಪೊಲೀಸ್ ಠಾಣೆಯಲ್ಲಿ ಕಳವಿಗೆ ಸಂಬಂದಿಸಿದಂತೆ  ಪ್ರಕರಣ ದಾಖಲಾಗಿರುತ್ತದೆ. ಮಾಲೂರು  ನಗರದ  ತಾಲ್ಲೂಕು ಆಪೀಸ್ ಬಳಿ ಘಟನೆ ಸಂಬವಿಸಿರುತ್ತದೆ,  ಮಾಲೂರು ತಾಲ್ಲೂಕು, ಮಾಸ್ತಿ ಹೋಬಳಿ, ರಾಮಸಾಗರ  ಗ್ರಾಮದ ವಾಸಿಯಾದ  ಸಾಮಪ್ಪ  ಬಿನ್ ವೆಂಕಟರಾಮಪ್ಪ   ಎಂಬುವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿದರರು ದಿನಾಂಕ 10-01-2020 ರಂದು ತನ್ನ ಬಾಬತ್ತು ಕೆ.ಎ. 53 ಜೆ.ಎಂ.ಪಿ. 20194. ಇಂಜನ್ ನಂಬರ್ : ಸಿಪಿ1ಎನ್ ಕೆ 1508207 ಸಂಖ್ಯೆಯ ದ್ವಿಚಕ್ರವಾಹನವನ್ನು  ನಗರದ  ತಾಲ್ಲೂಕು ಆಪೀಸ್ ಬಳಿ  ನಿಲ್ಲಿಸಿ  ಕೆಲಸ ಮುಸಿ ಬಂದು ನೋಡಲಾಗಿ ಯಾರೋ ಕಳ್ಳರು ಸದರಿ ದ್ವಿಚಕ್ರ ವಾಹನವನ್ನು ಕಳವು ಮಾಡಿ ಪರಾರಿಯಾಗಿರುತ್ತಾರೆ ಎಂಬು ದೂರು ದಾಖಲಿಸಿರುತ್ತಾರೆ. 

ಇತ್ತೀಚಿನ ನವೀಕರಣ​ : 03-08-2021 05:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080