ಅಭಿಪ್ರಾಯ / ಸಲಹೆಗಳು

ದಿನಾಂಕ: 18-10-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 19-10-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

 

ಯುವತಿ ಕಾಣೆಯಾಗಿರುವ ಬಗ್ಗೆ:

ಮಾಸ್ತಿ ಪೊಲೀಸ್‌ ಠಾಣೆಯಲ್ಲಿ ಯುವತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲ್ಲೂಕು ಟೇಕಲ್‌ ಹೋಬಳಿ  ಓಬಟ್ಟ ಅಗ್ರಹಾರ ಗ್ರಾಮದಲ್ಲಿ  ಘಟನೆ ಸಂಬವಿಸಿರುತ್ತದೆ,  ಸದರಿ ಗ್ರಾಮದ ವಾಸಿಯಾದ ಪ್ರಮೀಳಮ್ಮ ಕೊಂ ಲೇಟ್‌  ಮಂಜುನಾಥ್‌  ಎಂಬುವರ ಮಗಳು ಚೈತ್ರ (೧೯) ವರ್ಷ ಎಂಬುವರು ಮಾಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಬಿಕಾಂ ವ್ಯಾಸಾಂಗ ಮಾಡಿತ್ತಿದ್ದು, ಪ್ರತಿದಿನ  ೮:೩೦  ಗಂಟೆಗೆ  ಮನೆಯಿಂದ ಕಾಲೇಜಿಗೆ ಹೋಗಿ ಸಂಜೆ ಮನೆಗೆ ಬರುತ್ತಿದ್ದು, ದಿನಾಂಕ ೧೭-೧೦-೨೦೨೦ ರಂದು ಎಂದಿನಂತೆ ೮:೩೦  ಗಂಟೆಗೆ  ಮನೆಯಿಂದ ಕಾಲೇಜಿಗೆ ಹೋದವಳು ಮರುಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ , ಪಿರ್ಯದಿ ತನ್ನ ಮಗಳ ಕಾಣೆಯಾಗಿರುವುದಕ್ಕೆ  ಮಾಲೂರು ತಾಲ್ಲೂಕು  ದೊಡ್ಡದಾನವಹಳ್ಳೀ ಗ್ರಾಮದ ವಾಸಿಯಾದ ಶ್ರೀದರ್‌ ಬಿನ್ ಮೂರ್ತಿ ಎಂಬುವರ ಮೇಲೆ ಅನುಮಾನ ವ್ಯಕ್ತ ಪಡಿಸಿರುತ್ತಾರೆ.

 

 ಮಾರಣಾಂತಿಕ ರಸ್ತೆ ಅಪಘಾತ:

ಮುಳಬಾಗಿಲು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ ಮುಳಬಾಗಿಲು ತಾಲ್ಲೂಕು,  ಕೊಂಡಯ್ಯಹಳ್ಳಿ ಕ್ರಾಸ್‌ ಬಳಿ ಘಟನೆ ಸಂಬವಿಸಿರುತ್ತದೆ. ಮುಳಬಾಗಿಲು ತಾಲ್ಲೂಕು ಅಂಗೊಂಡಹಳ್ಳಿ ಗ್ರಾಮದ ವಾಸಿಯಾದ ಮಲ್ಲಿಕಾರ್ಜುನಯ್ಯ ಬಿನ್  ಚಿಕ್ಕನಂಜುಂಡಪ್ಪ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನ್ನ ಅಕ್ಕನ ಮಗನಾದ  ಶಿವಶಂಕರ (೪೦) ಎಂಬುವರು ಚಿಕ್ಕ ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದು, ಸದರಿ ಅಂಗಡಿಗೆ ಸರಕು ತರಲು ದಿನಾಂಕ ೧೮-೧೦-೨೦೨೦ ರಂದು ತನ್ನ ಬಾಬತ್ತುಕೆ.ಎ೦೭ ಇಸಿ ೭೮೧೨ ದ್ವಿಚಕ್ರವಾಹನದಲ್ಲಿ ವಾಹನದಲ್ಲಿ  ಮುಳಬಾಗಿಲುಗೆ ಹೋಗಿದ್ದು, ಎಲ್ಲಾ ಸರಕು ಖರೀದಿಸಿ ಸ್ವಗ್ರಾಮಕ್ಕೆ ಮರುಳುವಾಗ  ,  ಕೊಂಡಯ್ಯಹಳ್ಳಿ ಕ್ರಾಸ್‌ ಬಳಿ ವೆಂಕಟೇಶಪ್ಪ ತರಕಾರಿ ಅಂಗಡಿ ಬಳಿ ತನ್ನ  ಬಾಬತ್ತುಕೆ.ಎ೦೭ ಇಸಿ ೭೮೧೨ ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ಬದಿಯಿದ್ದ ಕೆ.ಎ ೦೭ ಡಬ್ಲೂ ೯೨೩೩ ದ್ವಿಚಕ್ರವಾಹನಕ್ಕೆ ಡಿಕ್ಕಿಹೊಡೆದು , ವಾಹನ ಸಮೇತ ಕೆಳಗೆ ಬಿದ್ದು, ತಲೆಗೆ ತೀವ್ರ ಗಾಯವಾಗಿದ್ದು, ಚಿಕಿತ್ತಸೆಗೆ ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲುಮಾಡಿದ್ದು ಚಿಕಿತ್ಸೆ ಪಲಕಾರಿಯಾಗದೇ ಮೃತಪಟ್ಟಿರುತ್ತಾರೆ.

ಇತ್ತೀಚಿನ ನವೀಕರಣ​ : 21-10-2020 01:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080